ಗದಗ: ದೇಶದೆಲ್ಲೆಡೇ ಇದೀಗ ರಾಮ ಮಂದಿರ ಉದ್ಘಾಟನೆಯದ್ದೇ ಮಾತು. ದೇಶದ ಕೋಟ್ಯಂತರ ಜನರ 500 ವರ್ಷಗಳ ಹೋರಾಟದ ಫಲವಾಗಿ ಇದೀಗ ರಾಮ ಮಂದಿರ ಇದೇ ಜನೆವರಿ 22 ರಂದು ಉದ್ಘಾಟನೆಗೆ ಸಜ್ಜಾಗಿದೆ. ಈ ನಡುವೆ ಅಯೋಧ್ಯಾ ನಗರದಲ್ಲಿರೋ ವಿಮಾನ ನಿಲ್ದಾಣಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.
ಆ ಹಿನ್ನೆಲೆ ಗದಗ ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಸಂಭ್ರಮಾಚರಣೆಯನ್ನ ಮಾಡಿದ್ರು. ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ರು.