ಹುಬ್ಬಳ್ಳಿ : ಇಲ್ಲಿನ ಹುಬ್ಬಳ್ಳಿಯ ನಾಮದೇವ ದೈವಕಿ ಸಮಾಜದ ವತಿಯಿಂದ ಸಿಂಪಿಗಲ್ಲಿ ಹರಿ ಮಂದಿರದಲ್ಲಿ ಶ್ರೀ ಸಂತ ಶಿರೋಮನಿ ನಾಮದೇವ ಮಹಾರಾಜರ 674 ನೇ ಪುಣ್ಯತಿಥಿ ಕಾರ್ಯಕ್ರಮವನ್ನ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ಜ್ಞಾನೇಶ್ವರಿ ಗ್ರಂಥ ಸ್ಥಾಪನೆ, ಜ್ಞಾನೇಶ್ವರಿ ಪಾರಾಯಣ, ಹರಿಪಾಠ, ಪ್ರವಚನ, ಕೀರ್ತನೆ, ಭಜನೆ, ಹರಿ ಜಾಗರಣೆ ಮುಂತಾದ ದಾರ್ಮಿಕ ಕಾರ್ಯಕ್ರಮಗಳು ನಡೆದವು.
ಹುಬ್ಬಳ್ಳಿ ಪೊಲೀಸ್ ಫೈರಿಂಗ್: ಸುಲಿಗೆಕೋರನ ಭಯಾನಕ ಚರಿತೆ ಬಿಚ್ಚಿಟ್ಟ ಪೊಲೀಸ್ ಕಮಿಷನರ್ ಶಶಿಕುಮಾರ್!
ವಿಶೇಷ ಪೂಜೆ, ಕಾಕಡಾರತಿ ಮುಂತಾದ ಕಾರ್ಯಗಳು ನಗರದ ಮುಖ್ಯ ಬೀದಿಯಲ್ಲಿ ಪಲ್ಲಕ್ಕಿ ಮೆರವಣಿಗೆ ಸಹ ನಡೆಸಲಾಯಿತು. ಎದುರು ಪಲ್ಲಕ್ಕಿ ಬಂದಾಗ ಭಕ್ತರು ನೀರು ಹಾಕಿ ಆರತಿ ಮಾಡಿ ಭಕ್ತಿ ಸೇವೆ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಸಂತರ ಭಜನೆಗಳು ಮೊಳಗಿದವು. ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದಿದ್ದರು. ಭಕ್ತಿ ಲೋಕ ಸೃಷ್ಟಿಯಾಗಿತ್ತು.
ದಿಂಡಿ ಉತ್ಸವ, ಕಾಲಾ ಕೀರ್ತನೆ, ಪುಷ್ಟವೃಷ್ಟಿ ಜರುಗಿದವು. ಉತ್ಸವ ಪ್ರಯುಕ್ತ ದೇವಸ್ಥಾನವನ್ನು ಬಣ್ಣದ ವಿದ್ಯುತ್ ದೀಪಗಳಂದ ಸಿಂಗರಿಸಲಾಗಿತ್ತು . ಸುಂದರ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಹಸಿರು ತಳಿರು ತೋರಣ ಕಟ್ಟಲಾಗಿತ್ತು. ದೇವಸ್ಥಾನದ ಪೂಜಾ ಮೂರ್ತಿಗಳಿಗೆ ಅಂಲಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿದೇವರ ದರ್ಶನ ಪಡೆದರು.
ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಲಾಗಿತ್ತು. ತುಂತುರು ಮಳೆಯ ಸಿಂಚನದ ನಡುವೆಯೂ ಭಕ್ತರು ಅತೀ ಉತ್ಸಾಹದಿಂದ ಉತ್ಸವದಲ್ಲಿ ಭಾಗಿಯಾಗಿದ್ದರು. ಶ್ರೀ ನಾಮದೇವ ಶಿಂಪಿ ಸಮಾಜ ಸೇವಾ ಸಂಘ, ಮಹಿಳಾ ಮಂಡಳ, ಯುವಕ ಮಂಡಳ ಸದಸ್ಯರು ಉತ್ಸವದ ಯಶಸ್ವಿಗೆ ಶ್ರಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ ಲಾಳಗೆ ವಹಿಸಿದ್ದರು. ಪಂಚ ಕಮಿಟಿಯ ವಿನಾಯಕ ರಾಶಿನಕರ, ರಾಜು ವ್ಹಾವಳಕರ, ನಾಮದೇವ ಮಿತ್ರ ಮಂಡಳದ ಅಧ್ಯಕ್ಷರಾದ ವಿಶಾಲ ಮುಸಳೆ, ಕಾರ್ಯದರ್ಶಿ ಗಣೇಶ ರಾಶಿನಕರ ಹಾಗೂ ಸಮಾಜದ ಗುರು ಹಿರಿಯರು ಮುಂತಾದವರು ಭಾಗವಹಿಸಿದ್ದರು.