ಬೆಂಗಳೂರು: ನಾವು ರಾಜೀನಾಮೆ ಕೇಳಿರಲಿಲ್ಲ. ಅವರೇ ಸ್ವಯಂಪ್ರೇರಿತರಾಗಿ ಸರ್ಕಾರಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಟ್ಟಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ಮಂತ್ರಿಗೂ ಇಷ್ಟು ದೊಡ್ಡ ಮಟ್ಟದ ಮೊತ್ತವನ್ನು ದುರುಪಯೋಗ ಮಾಡಲು ಧೈರ್ಯ ಬರಲ್ಲ.
ಇದು ಅಷ್ಟು ಸುಲಭವಾದ ಕೆಲಸವಲ್ಲ. ಈ ರೀತಿ ಯಾರೂ ಮಾಡಬಾರದು ಎಂದರು. ಈ ಬಗ್ಗೆ ನಾವು ನಾಗೇಂದ್ರ ಬಳಿ ಚರ್ಚೆ ಮಾಡಿದೆವು. ಆಗ ಅವರು ನೀವು ಸಿಬಿಐ ಆದ್ರೂ ಕೊಡಿ. ಯಾವ ತನಿಖೆಗಾದರೂ ಕೊಡಿ. ನಾನು ಯಾವುದೇ ರೀತಿಯ ತಪ್ಪು ಇದರಲ್ಲಿ ಮಾಡಿಲ್ಲ ಎಂದಿದ್ದಾರೆ. ಇನ್ನು ಬಿಜೆಪಿ ಸರ್ಕಾರದಲ್ಲಿಯೂ ಹಣ ವರ್ಗಾವಣೆಯಂತಹ ಘಟನೆಗಳು ನಡೆದಿವೆ. ಇದರಲ್ಲಿ ಕೆಲವು ಗೌಪ್ಯವಾಗಿ ಲೋಕಾಯುಕ್ತಕ್ಕೆ ಹೋಗಿವೆ,
ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? ನಿರ್ವಹಣೆ ಮತ್ತು ಆರೈಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.!
ಇನ್ನೂ ಕೆಲವು ತನಿಖೆ ಆಗಿದೆ ಎಂದು ಆರೋಪಿಸಿದರು. ರಾಜೀನಾಮೆ ಕೊಡಿ ಎಂದು ಹೇಳಿಲ್ಲ. ಅವರೇ ಸ್ವತಃ ಜವಾಬ್ದಾರಿಯುತವಾಗಿ ಬಂದು ರಾಜೀನಾಮೆ ನೀಡಿದ್ದಾರೆ. ಪಾರ್ಟಿಗೆ ನಾನು ಮುಜುಗರ ಮಾಡಲ್ಲ ಅಂತಾ ಹೇಳಿದ್ದಾರೆ. ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಿ ಎಂದು ಹೇಳಿಲ್ಲ. ಯಾಕೆಂದರೆ ನಮಗೂ ವಾಸ್ತವ ಏನು ಎಂದು ಗೊತ್ತಿಲ್ಲ ಎಂದು ಹೇಳಿದರು.