ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಕಳೆದ ಕೆಲ ದಿನಗಳ ಹಿಂದೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಮದುವೆಗೆ ಕೆಲವೇ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಸುಮಾರು 400 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು. ಅಂದ ಹಾಗೆ ನಾಗಚೈತನ್ಯ ಹೆತ್ತ ತಾಯಿ ಅಂದರೆ ನಾಗಾರ್ಜುನ್ ಮೊದಲ ಪತ್ನಿ ಲಕ್ಷ್ಮೀ ಈ ಮದುವೆಗೆ ಬಂದಿರಲಿಲ್ಲವ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಾಗಚೈತನ್ಯ ತಾಯಿ ನಾಗಾರ್ಜುನ್ ಮೊದಲ ಪತ್ನಿ ಲಕ್ಷ್ಮಿ ಅಮೆರಿಕದಲ್ಲಿ ಲಕ್ಷ್ಮಿ ಇಂಟೀರಿಯರ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಕಳೆದ ಆಗಸ್ಟ್ನಲ್ಲಿ ನಡೆದ ನಾಗ ಚೈತನ್ಯ ಅವರ ನಿಶ್ಚಿತಾರ್ಥದಲ್ಲಿ ತಮ್ಮ ಎರಡನೇ ಪತಿಯೊಂದಿಗೆ ಭಾಗವಹಿಸಿದ್ದ ಲಕ್ಷ್ಮಿ, ತನ್ನ ಮಗನ ಮದುವೆಯಲ್ಲಿ ಭಾಗವಹಿಸಲಿಲ್ಲ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು.
ನಾಗಚೈತನ್ಯ ಮದುವೆಗೆ ಲಕ್ಷ್ಮೀಯನ್ನು ಬಹಿಷ್ಕರಿಸಿದ್ದಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.. ಮಗ ಮತ್ತು ತಾಯಿ ನಡುವೆ ಏನಾದರೂ ಜಗಳನಾ ಎಂದು ಪ್ರಶ್ನಿಸಿದ್ದಾರೆ. ಆದರೆ ಲಕ್ಷ್ಮಿ ತನ್ನ ಮಗನ ಮದುವೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಅವರೊಂದಿಗೆ ಅವರ ಎರಡನೇ ಪತಿ ಶರತ್ ಕೂಡ ಭಾಗವಹಿಸಿದ್ದರು.
ಲಕ್ಷ್ಮಿ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟರಾಗಿರುವ ವೆಂಕಟೇಶ್ ಅವರ ಸಹೋದರಿ. ಬಾಹುಬಲಿ ನಾಯಕ ರಾಣಾ ದಗ್ಗುಬತಿ ಅವರ ಚಿಕ್ಕಮ್ಮ ಈ ಲಕ್ಷ್ಮಿ. ನಾಗಾರ್ಜುನರನ್ನು ವಿಚ್ಛೇದನ ಮಾಡಿದ ನಂತರ ಉದ್ಯಮಿ ಶರತ್ ವಿಜಯರಾಘವನ್ ಅವರನ್ನು ಮರುಮದುವೆಯಾಗಿ ಅಮೆರಿಕದಲ್ಲಿ ಸೆಟನ್ ಆಗಿದ್ದಾರೆ.
ಲಕ್ಷ್ಮಿಗೆ ವಿಚ್ಛೇದನ ನೀಡಿದ ನಂತರ ನಟಿ ಅಮಲಾಳನ್ನು ನಾಗಾರ್ಜುನ ಮದುವೆಯಾದರು. ಈ ಜೋಡಿಗೆ ಅಖಿಲ್ ಎಂಬ ಮಗನಿದ್ದಾನೆ.