ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿಯಿಂದ ಎನ್.ನಾಗರಾಜ್ ಸಂಬಂಧದ ಅಸ್ತ್ರ ಪ್ರಯೋಗವಾಗಿದೆ. ಡೆತ್ನೋಟ್ನಲ್ಲಿರುವ ಎನ್.ನಾಗರಾಜ್ ಜಾಡು ಹಿಡಿದು ಹೊರಟ ಬಿಜೆಪಿ ಸಚಿವ ನಾಗೇಂದ್ರ ಜೊತೆ ನಾಗರಾಜುಗೆ ವ್ಯವಹಾರಿಕ ಸಂಬಂಧ ಎಂದು ಗಂಭೀರ ಆರೋಪ ಮಾಡಿದೆ.
Anna Bhagya Scheme: ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಬಂದಿಲ್ವಾ..? ಈ ಕೆಲಸ ಮಾಡಿ ಸಾಕು
ನಾಗೇಂದ್ರ ಜೊತೆ ನಾಗರಾಜ್ ಇರುವ ಫೋಟೋ ರಿಲೀಸ್ ಮಾಡಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಅಲ್ಲದೆ ಸಿಎಂ ಜೊತೆ, ಡಿಸಿಎಂ ಜೊತೆ, ರಾಮಲಿಂಗರೆಡ್ಡಿ ಜೊತೆ ಇರುವ ಫೋಟೋ ರಿಲೀಸ್ ಮಾಡಿ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.