ಹುಬ್ಬಳ್ಳಿ; ಮಹಾಶಿವರಾತ್ರಿ ಹಬ್ಬದ ನಂತರ ಅಂಗವಾಗಿ ಸಂಯೋಗ ಗೆಳೆಯರ ಬಳಗದವರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು̤. ಸತತವಾಗಿ ಐದು ದಿನ ನಡೆದ ಕಾರ್ಯಕ್ರಮದಲ್ಲಿ ಯಶಸ್ವಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ನಗರದ ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಸಹಕಾರದಿಂದ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಶ್ರೀ ಸಿದ್ದಾರೂಢ ಮಠದ ಮುಂಭಾಗ ಅವರಣದಿಂದ ಮಠದ ಮುಖ್ಯ ದ್ವಾರ ಬಾಗಿಲದವರಿಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಮಾಡಲಾಯಿತು. ಮತ್ತು ಶ್ರೀ ಸಿದ್ಧಾರೂಢ ಅಜ್ಜನವರ ಜಾತ್ರೆಯಲ್ಲಿ ಬಹಳಷ್ಟು ಮಹನೀಯರು ಪ್ರಸಾದ ಸೇವೆ ಇನ್ನಿತರ ಸೇವೆಗೆ ಬಹಳ ಸೇವಾಭಾವದಿಂದ ನೀಡಿದ್ದು,
Diabetes: ಮಧುಮೇಹಿಗಳು ಬ್ಲಾಕ್ ಕಾಫಿ ಕುಡಿದರೆ ಏನಾಗುತ್ತದೆ..? ತಜ್ಞರು ಹೇಳೋದೇನು ಗೊತ್ತಾ..?
ಇದೊಂದು ಹೆಮ್ಮೆಯ ವಿಷಯ ಇಂದಿನ ಯುವಕರು ಸಮಾಜಮುಖಿಯಾದ ಕಾರ್ಯದಲ್ಲಿ ಭಾಗವಹಿಸಲು ಸಂಯೋಗ ಗೆಳೆಯರ ಒಳಗದ ಸಂಸ್ಥಾಪಕರಾದ ನಾಗರಾಜ್ ಗಬ್ಬೂರು ಸಲಹೆ ನೀಡಿದರು. ಈ ಬಳಗದ ಪದಾಧಿಕಾರಿಗಳ ಸುಭಾಸ ದೇವರಮನಿ, ಸಹದೇವ ಪೂಜಾರ್, ನಾಗರಾಜ್ ಗಣ್ಣೂರ, ಮಲಿಕ್ ಶಾನೂರ್ ಪಾಂಚಾನಾ, ಬಸವರಾಜ ಒಂಟಮನಿ, ಶ್ರೀಕಾಂತ್ ವಾಲಿಕಾರ್, ಸಂಜು ನಾಗರಾಜ್ ಉಂಡಕಲ್. ಸುನೀಲ್ ಮತ್ತು ಭವಾನಿ ಭಾಗವಹಿಸಿದ್ದರು.