ಸಮಂತಾ ಹಾಗೂ ನಾಗಚೈತನ್ಯ ದೂರವಾಗಿ ಕೆಲ ವರ್ಷಗಳೆ ಕಳೆದಿದೆ. ಆದರೆ ಈ ಜೋಡಿ ಮತ್ತೆ ಒಂದಾಗ್ಬೇಕು ಅನ್ನೋದು ಲಕ್ಷಾಂತರ ಅಭಿಮಾನಿಗಳ ಆಸೆಯಾಗಿದೆ. ಈ ಮಧ್ಯೆ ಸಮಂತಾ ಹಾಗೂ ನಾಗಚೈತನ್ಯ ಮತ್ತೆ ಒಂದಾಗ್ತಿದ್ದು ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಅಂದ ಹಾಗೆ ಸಮಂತಾ ಹಾಗೂ ನಾಗಚೈತನ್ಯ ಒಂದಾಗ್ತಿರೋದು ರಿಯಲ್ ಲೈಫ್ ನಲ್ಲಿ ಅಲ್ಲ. ಬದಲಾಗಿ ರೀಲ್ ಲೈಫ್ ನಲ್ಲಿ. ಸಮಂತಾ ಈಗಿನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಯೋಸಿಟಿಸ್ ಖಾಯಿಲೆ ಇನ್ನೂ ದೂರವಾಗಿಲ್ಲ. ಹಾಗಿದ್ದರೂ ಉತ್ತಮ ಆರೋಗ್ಯಕ್ಕಾಗಿ ಏನೇನು ಬೇಕು ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದಿಂದ ಸದ್ಯ ದೂರ ಇದ್ದಾರೆ. ಆದರೆ ಇವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಧೂತ ಹೆಸರಿನ ವೆಬ್ ಸರಣಿ ಸಮಂತಾ ಹಾಗೂ ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ನಾಗಚೈತನ್ಯ ಹೀರೋ. ಮೊದಲ ಭಾಗ ಹಿಟ್ ಆಗಿದೆ. ಎರಡನೇ ಭಾಗದಲ್ಲಿ ಸಮಂತಾ ಕೂಡ ಇರಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
‘ಧೂತ’ ವೆಬ್ ಸರಣಿಗೆ ವಿಕ್ರಮ್ ಇದರ ನಿರ್ದೇಶಕರಾಗಿದ್ದರು. ಮೊದಲ ಭಾಗ ಜನರಿಂದ ಮೆಚ್ಚುಗೆ ಪಡೆದಿತ್ತು. ಹೀಗಾಗಿಯೇ 2ನೇ ಭಾಗಕ್ಕೆ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ವಿಕ್ರಮ್. ಇದರಲ್ಲಿ ಸಮಂತಾ ನಟಿಸಬೇಕು ಎನ್ನುವುದು ಇವರ ಉದ್ದೇಶ. ಆದರೆ ಸಮಂತಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.