ನಿರೀಕ್ಷೆಯಂತೆ ನಾಗ ಚೈತನ್ಯ ಸೋಭಿತಾ ನಡುವಿನ ಸಂಬಂಧ ಖಚಿತವಾಗಿದೆ. ಅವರಿಬ್ಬರ ನಿಶ್ಚಿತಾರ್ಥವು ಯಾರೂ ನಿರೀಕ್ಷಿಸದ ರೀತಿಯಲ್ಲಿ ದಿಢೀರ್ ಮತ್ತು ಸರಳವಾಗಿ ಕೊನೆಗೊಂಡಿತು. ಈಗ ಡಿ.4ರಂದು ನಾಗಚೈತನ್ಯ ಮದುವೆ ಡೇಟ್ ನಿಗದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.
ಸಮಂತಾ ಮಾಜಿ ಪತಿ ನಾಗಚೈತನ್ಯ ಅವರು ಶೋಭಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದೇ ಡಿಸೆಂಬರ್ 4ರಂದು ಬಂಜಾರಾ ಹಿಲ್ಸ್ನಲ್ಲಿರುವ ಅನುಪಮಾ ಸ್ಟುಡಿಯೋದಲ್ಲಿ ಮದುವೆಯಾಗುತ್ತಿದ್ದಾರೆ. ಇದು ನಾಗಾರ್ಜುನ ಅಕ್ಕಿನೇನಿ ಅವರ ಒಡೆತನದಲ್ಲಿದೆ. ಈ ಮದುವೆಗೆ ಸೆಲೆಬ್ರಿಟಿಗಳು,
ಬೆಂಗಳೂರಿನ BEL ಕಂಪನಿಯಲ್ಲಿದೆ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ 2 ಲಕ್ಷ ಸಂಬಳ – ಇಂದೇ ಅರ್ಜಿ ಸಲ್ಲಿಸಿ
ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅಂದಹಾಗೆ, ನಟಿ ಸಮಂತಾ ಜೊತೆ ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ರಲ್ಲಿ ಇಬ್ಬರೂ ಡಿವೋರ್ಸ್ ಘೋಷಿಸಿದರು. ಹಲವು ವರ್ಷಗಳು ಪ್ರೀತಿ, ಮದುವೆಯ ಮುದ್ರೆ ಒತ್ತಿದ್ದ ಜೋಡಿ ಆ ನಂತರ ಡಿವೋರ್ಸ್ ಮೂಲಕ ವೈವಾಹಿಕ ಬದುಕಿಗೆ ಪೂರ್ಣ ವಿರಾಮವಿಟ್ಟರು.