ಕಲಬುರಗಿ: ದೈಹಿಕ ಸಂಬಂದ ಬೆಳೆಸು ಅಂತ ಕಿರುಕುಳ ನೀಡ್ತಿದ್ದ ಭಾವನನ್ನ ಖುದ್ದು ನಾದನಿಯೇ ಖಲಾಸ್ ಮಾಡಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಅಂಬಿಕಾ ಎಂಬಾಕೆ ಇದೀಗ ಪ್ರಿಯಕರ ರಾಜು ಎಂಬಾತನ ಜೊತೆ ಲಾಕ್ ಆಗಿದ್ದಾಳೆ.
ಅಂದಹಾಗೆ ಪೋಲೀಸರ ಅತಿಥಿಯಾಗಿರುವ ಅಂಬಿಕಾಳ ಅಕ್ಕನ ಗಂಡ ಅಂಬಾರಾಯ ಜನೆವರಿ 2ರಂದು ಕಮಲಾಪುರ ಬಳಿ ಕೊಲೆಯಾಗಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ಅಂಬಾರಾಯನ ನಾದನಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎಲ್ಲ ವಿಷ್ಯ ಬಟಾಬಯಲಾಗಿದೆ.
ದೈಹಿಕ ಸಂಪರ್ಕ ಹೊಂದುವಂತೆ ತನಗೆ ನಿತ್ಯವೂ ಟಾರ್ಚರ್ ಮಾಡ್ತಿದ್ದ ಕಾರಣಕ್ಕೆ ಕೊಲೆ ಮಾಡಿಸಿದ್ದೇನೆ ಅಂತ ಆರೋಪಿ ಬಾಯಿಬಿಟ್ಟಿದ್ದಾಳೆ..ಒಟ್ಟಾರೆ ಅಂಬಿಕಾ ಸೇರಿ 7 ಜನ ಇದೀಗ ಅರೆಸ್ಟಾಗಿದ್ದಾರೆ..