ಬೆಂಗಳೂರು: ಬಿಎಂಟಿಸಿ ಡಕೋಟಾ ಬಸ್ ಗಳ ಕಥೆ ನಿಮ್ಗೆಲ್ಲಾ ಗೊತ್ತೇ ಇದೆ. ಈಗ ಕೆಎಸ್ಆರ್ಟಿಸಿ ಬಸ್ ಗಳ ಬಂಡವಾಳವೂ ಬಯಲಾಗಿದೆ. ರಸ್ತೆಗಳಿಯೋತ್ತಿರೋ ಅರ್ಧಕ್ಕೂ ಹೆಚ್ಚು ಬಸ್ ಗಳು ಅನ್ ಫಿಟ್ ಅನ್ನೋದು ಬಯಲಾಗಿದೆ. ಹೀಗಾಗಿ ಕೆಎಸ್ಆರ್ಟಿಸಿ ಬಸ್ ಹತ್ತೋ ಮುನ್ನ ನೂರು ಬಾರಿ ಯೋಚಿಸುವಂತೆ ಮಾಡಿದೆ. ಹಾಗಾದರೆ ಸದ್ಯ ಕೆಎಸ್ಆರ್ಟಿಸಿ ಬಸ್ ಗಳ ಹೇಗೆಲ್ಲಾ ಅಧ್ವಾನ ಆಗಿವೆ ಬನ್ನಿ ತೋರಿಸ್ತೀವಿ
ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್ಗಳು ,ಇಳಿದು ತಳ್ಳುವ ಪ್ರಯಾಣಿಕರು,ಮಾರ್ಗ ಮಾಧ್ಯದಲ್ಲಿ ಹೆಚ್ಚಾಗುವ ಸಂಚಾರ ದಟ್ಟನೆ.ಇದು ರಾಜ್ಯದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಇತ್ತೀಚಿಗೆ ಸಾಮಾನ್ಯವಾಗ್ಬಿಟ್ಟಿದೆ..ಈ ಬಸ್ ಗಳಲ್ಲಿ ಹತ್ತುವ ಪ್ರಯಾಣಿಕರು ಇಳಿದು ತಳ್ಳಲು ಕೂಡ ಸಿದ್ದರಿಬೇಕಾದ ದುಸ್ಥಿತಿ ಎದುರಾಗಿದೆ. ಬೆಂಗಳೂರಿನಿಂದ ರಾಜ್ಯದ ಮೂಲೆ ಮೂಲೆಗಳಿಗೆ ಹೋಗುವ ಬಸ್ಗಳು ಎಲ್ಲೆಂದರಲ್ಲಿ ಇದ್ದಕ್ಕಿದ್ದಂತೆ ಕೆಟ್ಟ ನಿಂತು, ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡ್ತೀವೆ..ಆದರೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಕೆಎಸ್ ಆರ್ಟಿಸಿ ದಿನ್ಯ ಮೌನವಹಿಸಿದೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಹೌದು. ಕೆಎಸ್ಆರ್ಟಿಸಿ ವರ್ಷಕ್ಕೆರಡು ರಾಷ್ಟ್ರಮಟ್ಟದ ಬೆಸ್ಟ್ ಸಾರ್ವಜನಿಕ ಸಾರಿಗೆ ಅನ್ನೋ ಗರಿ. ಹೀಗಿದ್ದು ನಿಗಮ ಕೆಟ್ಟ ದಿನಗಳನ್ನ ಎದುರಿಸೋಕೆ ಶುರುವಾಗಿದೆ. ಸದ್ಯ ರಸ್ತೆಗಿಳಿಯುತ್ತಿರೋ ಸಾಕಷ್ಟು ಬಸ್ ಗಳು ಫಿಟ್ ಇಲ್ಲ. ಆದ್ರೆ ಬಸ್ ಗಳನ್ನ ರೋಡಿಗಿಳಿಸಲಾಗ್ತಿದೆ. ಹಿಂಬದಿ ಚಕ್ರದ ಮೇಲೆ ಫುಟ್ ಬೋರ್ಡ್ ಕಿತ್ತಿದ್ರೂ ಬಸ್ ಕಂಡೀಷನ್ ಇಲ್ಲದಿದ್ರೂ ಓಡಲಾಗ್ತಿದೆ. ಜೊತೆಗೆ ಬಸ್ ಕೆಟ್ಟು ನಿಂತಾಗ ಅಸಾಯಕರಾದ ಚಾಲಕರು, ಇಳಿದು ತಳ್ಳುವಂತೆ ಪ್ರಯಾಣಿಕರನ್ನ ಕೇಳುವ ಪ್ರಮೇಯ ಬಂದಿದೆ.ಸುಸ್ಥಿತಿಯಲ್ಲಿ ಇರದ ಬಸ್ಗಳನ್ನ ಚಾಲನೆ ಮಾಡುವುದು ಕಷ್ಟ ಎಂದು ಹೇಳಿದರೂ ಅಧಿಕಾರಿಗಳು ಮಾತ್ರ ಕೇಳುತ್ತಿಲ್ಲ. ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಬಸ್ ಚಾಲಕ ಬಸ್ ತೆಗೆದುಕೊಂಡು ಬಂದರೆ ರಸ್ತೆ ಮಧ್ಯ ಬಸ್ ನಿಲ್ಲುತ್ತೀವೆ.ರಸ್ತೆಯ ಮಧ್ಯ ಬಸ್ಗಳು ಕೆಟ್ಟ ಗಂಟೆಗಟ್ಟಲೆ ನಿಲ್ಲುತ್ತವೆ.ಈ ವೇಳೆ ವಾಹನ ದಟ್ಟನೆ ನಿಭಾಯಿಸುವುದು ಕಷ್ಟದ ಕೆಲಸ.ಸುಸ್ಥಿತಿಯಲ್ಲಿ ಬಸ್ಗಳನ್ನ ರಸ್ತೆಗೆ ಇಳಿಸುವಂತೆ ಪ್ರಯಾಣಿಕರು ಎಷ್ಟೇ ಮನವಿ ಮಾಡಿದರು ನಿಗಮದ ಅಧಿಕಾರಿಗಳು ಕೇಳುತ್ತಿಲ್ಲ..
ಬಸ್ ಸ್ಥಗಿತದಿಂದಾಗಿ ಸಂಸ್ಥೆ ಜನಪ್ರಿಯತೆ ಕೂಡ ಕುಸಿಯುತ್ತಿದೆ. ಡಿಪೋನಿಂದ ಬಸ್ ಗಳನ್ನ ಕಳಿಸುವಾಗ ಬಸ್ ನ ಗುಟ್ಟಮಟ್ಟ ಪರಿಶೀಲನೆ ಮಾಡಿ ರಸ್ತೆಗಿಳಿಸಬೇಕು. ಆದರೆ ವಾಹನ ಗುಣಮಟ್ಟ ಇಲ್ಲದಿದರೂ ರೋಡಿಗಿಳಿಸುವ ಯತ್ನ ಡಿಪೋ ಮ್ಯಾನೇಂಜರ್ ನಿಂದ ನಡೆಯುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. 9 ಲಕ್ಷ ಕಿಲೋ ಮೀಟರ್ ಗಿಂತ ಹೆಚ್ಚು ಓಡಿರುವ ಹಾಗೂ 10 ವರ್ಷಗಳಿಗೂ ಹೆಚ್ಚು ಹಳೆಯದಾದ ಬಸ್ಗಳ , ಎಂಜಿನ್ ನ್ನು ಬದಲಾಯಿಸಬೇಕು.ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್ ಸಂಚರಿಸುವಾಗ ಇದ್ದಕ್ಕಿದ್ದಂತೆ ಕೆಟ್ಟು ನಿಲ್ಲುತ್ತೀವೆ.ನಗರದಿಂದ ಹೊರಟ ನೂರಾರು ಬಸ್ಗಳು ಮಾರ್ಗ ಮಧ್ಯದಲ್ಲಿ ಕೆಟ್ಟು ನಿಲ್ಲುತ್ತಿವೆ. ಈ ಬಗ್ಗೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಕೆಎಸ್ಆರ್ಟಿಸಿ ಯಲ್ಲಿ 8000 ಸಾವಿರಕ್ಕೂ ಹೆಚ್ಚು ಬಸ್ ಗಳಿದ್ದು,ಇದರಲ್ಲಿ ನಿತ್ಯ ನೂರಾರು ಬಸ್ ಗಳು ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿವೆ. ಎಲ್ಲೆಂದರಲ್ಲಿ ಮಾರ್ಗ ಮಧ್ಯದಲ್ಲೇ ಕೆಟ್ಟು ನಿಂತುಕೊಳ್ಳವದರಿಂದ ಪ್ರಯಾಣಿಕರಿಗೆ ಆಕ್ರೋಶಕ್ಕೆ ಕಾರಣವಾಗ್ತಿದೆ. ಮಾರ್ಗ ಮಧ್ಯದಲ್ಲಿ ಪ್ರಯಾಣಿಕರು ಸಹ ಬಸ್ ತಳ್ಳಾಂಡಿ ನುಕ್ಕಾಂಡಿ ಸ್ಟಾರ್ಟ್ ಮಾಡಬೇಕಾಗಿದೆ. 8 ರಿಂದ 10 ಲಕ್ಷ ಸಂಚಾರ ಮಾಡಿರುವ ಸಾವಿರಾರು ಬಸ್ ಗಳನ್ನ ಗುಜರಿಗೆ ಹಾಕಬೇಕು. ಆದರೆ ಗುಜರಿಗೂ ಹಾಕುವ ಪ್ರಯತ್ನ ಆಗಿಲ್ಲ. ಇದರ ಜೊತೆಗೆ ಇರುವ ಬಸ್ ಗಳನ್ನ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿರೋದರಿಂದ ಪ್ರಯಾಣಿಕ ಕಿರಿಕಿರಿ ಅನುಭವಿಸಬೇಕಿದೆ.