ಬೆಂಗಳೂರು ಗ್ರಾಮಾಂತರ: ಡಕಾಯಿತಿ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ನಿಗೂಢ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಡಿವಾಳದ ತಾವರೆಕೆರೆ ಮೂಲದ ಆರೋಪಿ ಗಣೇಶ್ನನ್ನ ದರೋಡೆ ಪ್ರಕರಣದಲ್ಲಿ (Robbery case) 2023ರ ಡಿಸೆಂಬರ್ 22ರಂದು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಗಣೇಶ್ ತೀವ್ರ ನೋವಿನಿಂದ ಒದ್ದಾಡಿದ್ದ. ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಆರೋಪಿಯನ್ನ ಠಾಣೆಯಲ್ಲಿ ಹಲವು ದಿನ ಇಟ್ಟುಕೊಂಡಿದ್ದ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ರು. ವಿಚಾರಣೆ ಮಾಡುವ ವೇಳೆ ಮರ್ಮಾಂಗಕ್ಕೆ ಗಾಯ ಆಗಿತ್ತು. ಮರ್ಮಾಂಗಕ್ಕೆ ಖಾರದಪುಡಿ ಹಾಕಿರೋದಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರು ಹೆಚ್ಎಸ್ಆರ್ ಠಾಣೆ ಪೊಲೀಸರ (HSR Police Station) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ