ಮೈಸೂರು:- ಗಾಂಜಾ ಮಾರಾಟ ಆರೋಪ ಸಂಬಂಧ ಮೈಸೂರಿನ ಕಾವೇರಿನಗರದ ಗೋದಾಮಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹದೇವಪುರ ಮುಖ್ಯರಸ್ತೆಯ ಕಾವೇರಿನಗರದಲ್ಲಿರುವ ಗೋದಾಮಿನಲ್ಲಿ ಗಾಂಜಾ ಸಂಗ್ರಹಣೆ ಮಾಡಿಟ್ಟಿದ್ದ ವಿಚಾರ ತಿಳಿದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ದಾಳಿ ವೇಳೆ ಸಿಸಿಬಿ ಪೊಲೀಸರು 20.19 ಲಕ್ಷ ಮೌಲ್ಯದ 57 ಕೆ.ಜಿ. 700 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಆಸೀಮ್, ನದೀಮ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಫರ್ಜು ಪರಾರಿಯಾಗಿದ್ದಾನೆ.