ಮೈಸೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ 1,000 ಕೋಟಿಗೂ ಹೆಚ್ಚು ಆರ್ಥಿಕ ನಷ್ಟ ಅನುಭವಿಸಿರುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಉದ್ಯೋಗ: ಕೈ ತುಂಬಾ ಸಂಬಳ, ಅರ್ಹರು ಇಂದೇ ಅರ್ಜಿ ಸಲ್ಲಿಸಿ!
ಮೈಸೂರಿನ ನಿರ್ಗಮಿತ ಡಿಸಿ ಡಾ.ಕೆ.ವಿ.ರಾಜೇಂದ್ರ ಮುಡಾ ಹಗರಣದ ಬಗ್ಗೆ ಕಳೆದ ನವೆಂಬರ್ನಲ್ಲೇ ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರ ಈಗ ಬೆಳಕಿಗೆ ಬಂದಿದೆ. ಕಾನೂನು ಬಾಹಿರವಾಗಿ ಸೈಟು ಹಂಚಿಕೆ ಮಾಡಿರುವುದರಿಂದ ಸರ್ಕಾರಕ್ಕೆ 1,000 ಕೋಟಿ ರೂ. ಗಿಂತಲೂ ಹೆಚ್ಚು ಆರ್ಥಿಕ ನಷ್ಟವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಸುಧೀರ್ಘ ಪತ್ರದಲ್ಲಿ `ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವಾರು ಪ್ರಕರಣಗಳಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲವೆಂದು, ಬದಲಿಯಾಗಿ ಅಭಿವೃದ್ಧಿ ಹೊಂದಿದ ಜಾಗದಲ್ಲಿ ಬೆಲೆಬಾಳುವ ಆಸ್ತಿಗಳನ್ನು ನೀಡಲಾಗಿದೆ. ನಿಯಮ ಬಾಹಿರವಾಗಿ 50:50 ಅನುಪಾತದಲ್ಲಿ ಕಾನೂನು ಬಾಹಿರವಾಗಿ ಸೈಟು ಹಂಚಿಕೆ ಮಾಡಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ಹಾಗೂ ಸರ್ಕಾರಕ್ಕೆ ಸುಮಾರು 1,000 ಕೋಟಿ ರೂ.ಗಿಂತಲೂ ಹೆಚ್ಚು ಆರ್ಥಿಕ ನಷ್ಟವುಂಟಾಗಿದೆ. ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಯಶಸ್ವಿನಿ ಸೋಮಶೇಖರ್, ಹಿಂದಿನ ಆಯುಕ್ತರಾದ ಡಿ.ಬಿ ನಟೇಶ್, ಹಾಲಿ ಆಯುಕ್ತರಾದ ಜಿ.ಟಿ ದಿನೇಶ್ ಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಹರ್ಷವರ್ಧನ್, ವಿಷ್ಣುವರ್ಧನ ರೆಡ್ಡಿ ಮತ್ತು ಸಂಭಂಧ ಪಟ್ಟ ವಿಶೇಷ ತಹಶೀಲ್ದಾರರು ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ