ಹಾಸನ:- ಮೈಸೂರು ನನ್ನ ಕರ್ಮಭೂಮಿ, ಅಲ್ಲೇ ಇರುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಂಚಲನ ಮೂಡಿಸಿದ್ದಾರೆ.
ವೈದ್ಯರ ಇಂಗ್ಲೀಷ್ ಬರವಣಿಗೆ ಅಸ್ಪಷ್ಟ, ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸಿ: ಆರೋಗ್ಯ ಸಚಿವರಿಗೆ ಪತ್ರ!
ನಾನು ಆ ಪಕ್ಷ, ಈ ಪಕ್ಷ ಅಂಥ ಹೇಳುತ್ತಿಲ್ಲ. ಎಲ್ಲಾ ಪಕ್ಷದ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯದಲ್ಲಿ ಇದ್ದಾರೆ. ಇಲ್ಲ ಎಂದರೆ ಮುಡಾದಲ್ಲಿ ಬಿಜೆಪಿ-ಜೆಡಿಎಸ್ನವರದ್ದು ಇದೆ ಎಂದು ಹೇಳುತ್ತಾರೆ.
ಕಾಂಗ್ರೆಸ್ನವರು ಏಕೆ ಬಿಡಿತ್ತಿಲ್ಲ. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ನವರು ಒಂದು ಸಾಕ್ಷಿನಾದರೂ ಕೊಟ್ಟಿದ್ದಾರಾ? ತನಿಖಾ ಏಜೆನ್ಸಿ ಅವರ ಹತ್ತಿರವೇ ಇದೆ. ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ. 40% ಹಗರಣದ ಬಗ್ಗೆ ತನಿಖೆ ಮಾಡಿಸಿ.
ಪಿಎಸ್ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ. ಪ್ರೀಯಾಂಕ್ ಖರ್ಗೆ ನನ್ನ ಹತ್ರ ದಾಖಲೆ ಇದೆ ಅಂತ ಹೇಳಿಕೆ ಕೊಟ್ಟಿದ್ರಲ್ಲಾ ಕೊಡಪ್ಪ ಇವಾಗ. ಇಟ್ಟುಕೊಂಡು ಏನು ಮಾಡುತ್ತಿದ್ದೀರಾ ನೀವು ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರವೇ ನಿಮ್ಮ ಕೈಯಲ್ಲಿ ಇದೆ. ಯಾವ್ಯಾವ ಹಗರಣದ ಇದೆ ಎಲ್ಲಾ ತೆಗೆದುಕೊಂಡು ಬನ್ನಿ. ಹಿರಿಯ ರಾಜಕಾರಣಿಗಳು ಏನಿದ್ದೀರಿ ಒಬ್ಬಬ್ಬರನ್ನು ಒಬ್ಬೊಬ್ಬರು ಎಕ್ಸ್ಪೋಸ್ ಮಾಡಿಕೊಳ್ಳಿ. ಕನಿಷ್ಠ ಮುಂದಿನ ತಲೆಮಾರಿಗಾದರೂ ಒಳ್ಳೆಯ ರಾಜಕಾರಣಿಗಳು ಬರಲು ಅವಕಾಶ ಆಗುತ್ತೆ ಎಂದು ಗುಡುಗಿದ್ದಾರೆ.