ಹುಬ್ಬಳ್ಳಿ: ಹೆಂಡತಿ ಕಿರುಕುಳ ತಾಳಲಾರದೇ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ಪೀಟರ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಪೀಟರ್ ಸಾವಿಗೂ ಮುನ್ನ ಡೆಥ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. “ಡ್ಯಾಡಿ ಆಯಮ್ ಸಾರಿ” ಎಂದು ಡೆಥ್ ನೋಟ್ ಬರೆದಿಟ್ಟು, ತನ್ನ ಹೆಂಡತಿ “ಪಿಂಕಿ ಈಸ್ ಕಿಲ್ಲಿಂಗ್ ಮೀ ಸೀ ವಾಂಟ್ ಮೈ ಡೆಥ್” ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಪೀಟರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.ಕಳೆದ ಕೆಲ ದಿನಗಳಿಂದ ಗಂಡ ಹೆಂಡತಿ ಮದ್ಯೆ ಜಗಳವಾಗುತ್ತಿತ್ತು
ಹೆಂಡತಿ ಪಿಂಕಿ ಖಾಸಗಿ ಶಾಲಾ ಶಿಕ್ಷಕಿಯಾಗಿದ್ದಳು. ಶಾಲೆಯಿಂದ ತಡವಾಗಿ ಯಾಕೆ ಬಂದೆಯನ್ನ ಅಂತ ಕೇಳಿದ್ರೆ, ನೀವು ನನಗರ ಟಾರ್ಚರ್ ಕೊಡುತ್ತಿದ್ದೀರಿ ಎಂದು ಗಂಡ ಹಾಗೂ ಮನೆಯವರ ಜಗಳವಾಡುತ್ತಿದ್ದಳು. ಗಂಡನಿಂದ ಡೈವೋರ್ಸ್ ಗಾಗಿ ಪತ್ನಿ ಪಿಂಕಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ವಿಚ್ಛೇದನ ಕೋರಿ ಜೀವನಾಂಶಕ್ಕಾಗಿ 20 ಲಕ್ಷ ಕೊಡುವಂತೆ ಪೀಡಿಸುತ್ತಿದ್ದಳಂತೆ. ಕಳೆದ ಏಳೆಂಟು ತಿಂಗಳುಗಳಿಂದ ದೂರ ದೂರವಾಗಿದ್ದಳು. ಅನೈತಿಕ ಸಂಬಂಧ ಹಿನ್ನೆಲೆ ದೂರವಾಗಿದ್ದಾಗಿ ಕುಟುಂಬಸ್ಥರ ಆರೋಪಿಸಿದ್ದಾರೆ.
Periods: ಮಹಿಳೆಯರೇ ಗಮನಿಸಿ.. ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ..? ಇಲ್ಲಿದೆ ಮಾಹಿತಿ
ಪತ್ನಿ ಪಿಂಕಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ್ದಕ್ಕೆ ನಿತ್ಯ ಜಗಳವಾಡುತ್ತಿತ್ತು. ದೂರವಾಗಿ ಜೀವನಾಂಶಕ್ಕಾಗಿ ಕಿರುಕುಳ ನೀಡುತ್ತಿದ್ದಳು. ಇದರಿಂದಾಗಿಯೇ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು
ಮೃತ ಪತಿ ಪೀಟರ್ ತಂದೆ ಓಬಯ್ಯ ಹಾಗೈ ತಾಯಿ ರುಬಿಕಮ್ಮ ಗಂಭೀರ ಆರೋಪಿಸಿದ್ದಾರೆ. ಶವಪೆಟ್ಟಿಗೆ ಮೇಲೂ ಹೆಂಡತಿ
ಕಿರಿಕುಳ ಬರೆಸುವಂತೆ ಮನವಿ :
ಸಾವಿಗೂ ಮುನ್ನ ಡೆತ್ ನೋಟ್ ನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಮೃತ ಪೀಟರ್ ಮನವಿ ಮಾಡಿದ್ದಾನೆ. ಹೀಗಾಗಿ ಶವದ ಪೆಟ್ಟಿಗೆ ಮೇಲೆ ನನ್ನ ಹೆಂಡತಿಯ ಕಾಟ ತಾಳಲಾರದೇ ಸತ್ತೇನು ಎಂದು ಬರೆಸುವ ಮೂಲಕ ಕುಟುಂಬಸ್ಥರು ಪೀಟರ್ ಕೊನೆ ಆಸೆ ತೀರಿಸಿದ್ದಾರೆ.
ಪತ್ನಿ ಕಿರುಕುಳದಿಂದ ಸಾವನ್ನಪ್ಪಿದ ಗಂಡಪೀಟರ್ ಸಾವಿಗೆ ನ್ಯಾಯ ಕೊಡಿಸುವಂತೆ ಮೃತ ಪೀಟರ್ ಕುಟುಂಬಸ್ಥರು ಸೂಕ್ತ ನ್ಯಾಯ ಕೊಡಿಸಬೇಕು.ಪತ್ನಿ ಹಾಗೂ ಪತ್ನಿಯ ಮನೆಯವರನ್ನ ಬಂಧಿಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.