‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ರಕ್ಷಕ್ ಬುಲೆಟ್ (Rakshak Bullet) ಅವರು ಇತ್ತೀಚೆಗೆ ಅದೇನೇ ಮಾತನಾಡಿದರೂ ಕಾಂಟ್ರವರ್ಸಿ ಆಗುತ್ತಿದೆ. ತಮ್ಮ ಹೇಳಿಕೆಗಳನ್ನು ತಿರುಚಿ ವೈರಲ್ ಆಗ್ತಿರೋ ವಿಡಿಯೋ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈ ಕುರಿತು ಪೋಸ್ಟೊಂದನ್ನು ಹಂಚಿಕೊಂಡಿದ್ದಾರೆ.
ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ ತಮ್ಮ ಇತ್ತೀಚಿನ ದಿನಗಳಲ್ಲಿ ನೀಡಿರುವ ಕೆಲವೇ ಹೇಳಿಕೆಗಳನ್ನು ತಿರುಚಿ ಬೇರೇಯದ್ದೇ ರೂಪ ಕೊಟ್ಟಿರುವ ಬಗ್ಗೆ ಅದರಿಂದ ತಮಗೆ ಮಾನಸಿಕ ಹಿಂಸೆ ಆಗುತ್ತಿದೆ ಎಂದು ರಕ್ಷಕ್ ಹೇಳಿಕೊಂಡಿದ್ದಾರೆ. ನಾನು ಬುಲೆಟ್ ಪ್ರಕಾಶ್ ಅವರ ಮಗ, ನನ್ನ ತಂದೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರನ್ನು ಹರಸಿ ಬೆಳೆಸಿದ್ದೀರಾ. ಅವರ ಮಗನಾಗಿ ನಾನು ಜನಸಿರೋದು ನನ್ನ ಪುಣ್ಯ ಎಂದಿದ್ದಾರೆ.
ಬಳಿಕ ನನ್ನ ತಂದೆಯಲ್ಲಿರುವ ನೇರ ನುಡಿ ನನಗೂ ಬಂದಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಿದ್ದಾರೆ. ಅದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದ್ದು, ನಾನು ಯಾರ ಭಾವನೆಗೂ ಧಕ್ಕೆ ತರುವ ಹೇಳಿಕೆಯನ್ನಾಗಲಿ ನೀಡುವುದನ್ನು ಅಭ್ಯಾಸ ಮಾಡಿಕೊಂಡಿಲ್ಲ ಎಂದು ರಕ್ಷಕ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.