ಧಾರವಾಡ: ನನ್ನ ಮಗ ಮಾಡಿರುವ ತಪ್ಪಿಗೆ ಕರ್ನಾಟಕದ ಸಮಸ್ತ ಜನತೆಗೆ ಕೈಮುಗಿದು ಕ್ಷಮೆ ಯಾಚಿ ಸುತ್ತೇನೆ ಎಂದು ನೇಹಾ ಹತ್ಯೆಗೈದ ಫಯಾಜ್ ತಾಯಿ (Fayaz Mother) ಮುಮ್ತಾಜ್ ಕಣ್ಣೀರಿಟ್ಟಿದ್ದಾರೆ. ಮಗನ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ನೇಹಾಳ ತಂದೆ-ತಾಯಿಯವರಲ್ಲೂ ನಾನು ಕ್ಷಮೆ ಕೇಳುತ್ತೇನೆ. ನೇಹಾ (Neha Hiremath) ಕೂಡ ನನ್ನ ಮಗಳು ಇದ್ದಂತೆ. ನೇಹಾ ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ.
ಎಲೆಕೋಸನ್ನ ವಾರಕ್ಕೊಮ್ಮೆ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ನೇಹಾ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ಆಗಿದೆ ಎಂದು ಅಳಲು ತೋಡಿಕೊಂಡರು. ನನ್ನ ಮಗ ಮಾಡಿರುವುದು ತಪ್ಪು. ಯಾವ ಮಕ್ಕಳು ಮಾಡಿದರು ತಪ್ಪು ತಪ್ಪೇ. ಈ ನೆಲದ ಕಾನೂನು ಏನು ಹೇಳುತ್ತೋ ಅದರ ಪ್ರಕಾರವೇ ಶಿಕ್ಷೆ ಆಗಲಿ ಎಂದು ಹೇಳಿದರು. ನನ್ನ ಮಗನನ್ನ ಐಎಎಸ್ ಅಧಿಕಾರಿ ಮಾಡುವ ಆಸೆ ಇತ್ತು. ತುಂಬಾ ಬುದ್ಧಿವಂತ ಇದ್ದ. ಎಲ್ಕೆಜಿ, ಯುಕೆಜಿ ಯಿಂದ 90% ಜಾಸ್ತಿ ಮಾರ್ಕ್ಸ್ ತೆಗೆಯುತ್ತಿದ್ದ ಎಂದು ಮಗನ ಬಗ್ಗೆ ಹೇಳಿಕೊಂಡರು.