ಇಲ್ಲೊಬ್ಬ ಮಹಿಳೆ 11 ವರ್ಷಗಳ ಹಿಂದೆ ಸತ್ತ ಪತಿ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡಿ ತನ್ನನ್ನು ಗರ್ಭಿಣಿ ಮಾಡಿ ಮಗುವನ್ನು ನೀಡಿದ್ದಾನೆ ಎಂದು ಹೇಳುತ್ತಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಗತಿ ಹೊಂದುತ್ತಿರುವ ಇಂದಿನ ವಿಜ್ಞಾನಯುಗಕ್ಕೆ ಈ ಘಟನೆ ಒಂದು ಸವಾಲು ಹಾಕಿದಂತಾಗಿದೆ. ಈ ವಿಡಿಯೊವನ್ನು ನೋಡುತ್ತಿರುವವರು ಒಮ್ಮೆ ತಲೆ ಹಿಡಿದುಕೊಂಡು ಯೋಚಿಸುವುದಂತೂ ಖಂಡಿತ. ಯಾಕೆಂದರೆ ಇದು ಮಾನವ ಜೀವನದಲ್ಲಿ ಅಸಾಧ್ಯವಾದುದ್ದಾಗಿದೆ.
ವಿನೇಶ್ ಫೋಗಟ್ ಅನರ್ಹ: ಕೆಲವು ಪಿತೂರಿ ಹಾಗೂ ನರೇಂದ್ರ ಮೋದಿ ಕಾರಣವಾ!?, ನೆಟ್ಟಿಗರು ಹೇಳ್ತಿರೋದೇನು!?
ಈ ವಿಡಿಯೊದಲ್ಲಿ ಯೂಟ್ಯೂಬರ್ ಒಬ್ಬರು ಕೈಯಲ್ಲಿ ಹಸು ಕಂದನನ್ನು ಎತ್ತಕೊಂಡ ಮಹಿಳೆಯೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾರೆ. ಆಕೆಯ ಉತ್ತರ ಕ್ಷಣ ಕ್ಷಣಕ್ಕೂ ವಿಚಿತ್ರ ಎನಿಸುತ್ತದೆ. ಯಾಕೆಂದರೆ ಆಕೆ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗೂ ಆ ಮಗು ತನ್ನ ಗಂಡನಿಂದ ತನಗೆ ದೊರಕಿದೆ ಎಂದು ಹೇಳುತ್ತಾಳೆ. ಆದರೆ ಆಕೆ ತನ್ನ ಪತಿ 11 ವರ್ಷಗಳ ಹಿಂದೆಯೇ ಸತ್ತು ಹೋಗಿದ್ದಾರೆ ಎಂದು ಹೇಳಿದ್ದಾಳೆ.
ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತಿದೆ. ಹಾಗಾದ್ರೆ ಆಕೆಯ ಪತಿ 11 ವರ್ಷಗಳ ಹಿಂದೆ ಸತ್ತ ಮೇಲೆ ಆತನಿಂದ ಮಗುವನ್ನು ಹೇಗೆ ಪಡೆದಳು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೆ ಉತ್ತರಿಸಿದ ಮಹಿಳೆ ತನ್ನ ಪತಿ ತನ್ನ ಕನಸಿನಲ್ಲಿ ಬಂದು ತನ್ನ ಜೊತೆ ಸಂಸಾರ ಮಾಡುತ್ತಿದ್ದನು. ಹಾಗಾಗಿ ಅವಳು ಗರ್ಭಿಣಿಯಾದಳು ಎಂದು ಹೇಳಿದ್ದಾಳೆ. ಮಹಿಳೆಯ ಈ ಉತ್ತರ ಕೇಳುಗರಲ್ಲಿ ಆಶ್ಚರ್ಯನ್ನುಂಟು ಮಾಡಿದೆ. ಮಹಿಳೆಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ