ಹೊಸ ವರ್ಷದ ಸಂಭ್ರಮದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸಂಭ್ರಮ ಶುರುವಾಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಬಿಗ್ ಬಾಸ್ಗೆ ಎಂಟ್ರಿ ಕೊಡುತ್ತಿದ್ದ ತಮ್ಮವರೊಂದಿಗೆ ಕೆಲ ಸಮಯ ಕಳೆಯುತ್ತಿದ್ದಾರೆ. ಅಂತೆಯೇ ಹನುಮಂತನ ಪೋಷಕರು ಮತ್ತು ಚೈತ್ರಾ ತಾಯಿ ಹಾಗೂ ತಂಗಿ ಮನೆಗೆ ಬಂದಿದ್ದಾರೆ. ಈ ವೇಳೆ, ಸ್ಪರ್ಧಿಗಳ ಮುಂದೆ ನನ್ನ ಮಗಳು ಕಳಪೆಯಲ್ಲ, ಅವಳು ನಮಗೆ ಯಾವಾಗಲು ಉತ್ತಮ ಎಂದು ಚೈತ್ರಾ ಪರ ತಾಯಿ ಮಾತನಾಡಿದ್ದಾರೆ.
‘ಬಿಗ್ ಬಾಸ್’ 11 ಶುರುವಾಗಿ ಇಂದಿಗೆ 96 ದಿನಗಳು ಕಳೆದಿವೆ. ಈ ವಾರ ಸ್ಪರ್ಧಿಗಳಿಗೆ ವಿಶೇಷವಾಗಿ ತಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿದ್ದಾರೆ ಇಂದಿನ ಸಂಚಿಕೆಯಲ್ಲಿ ಧನರಾಜ್ ಆಚಾರ್, ಹನುಮಂತ ಹಾಗೂ ಚೈತ್ರಾ ಕುಂದಾಪುರ ಫ್ಯಾಮಿಲಿಯವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ತಾಯಿ ಹಾಗೂ ತಂಗಿ ಎಂಟ್ರಿ ಕೊಟ್ಟಿದ್ದು, ಅಮ್ಮನನ್ನು ನೋಡುತ್ತಿದ್ದಂತೆ ಚೈತ್ರಾ ಭಾವುಕರಾಗಿದ್ದಾರೆ. ಈ ವೇಳೆ, ನಿಮಗೆ ನನ್ನ ಅಕ್ಕ ಬಾಸ್, ನನಗೆ ನೀವು ಬಾಸ್ ಎಂದು ರಜತ್ಗೆ ಚೈತ್ರಾ ತಂಗಿ ಡೈಲಾಗ್ ಹೊಡೆದಿದ್ದಾರೆ. ಆ ನಂತರ ಸ್ಪರ್ಧಿಗಳ ಮುಂದೆ ತಾಯಿ ಆಡಿದ ಮಾತಿಗೆ ಚೈತ್ರಾ ಕಣ್ಣೀರಿಟ್ಟಿದ್ದಾರೆ. ಮನೆಯಲ್ಲಿ ಚೈತ್ರಾ ಸತತವಾಗಿ 4 ಬಾರಿ ಸ್ಪರ್ಧಿಗಳಿಂದ ಕಳಪೆ ಪಟ್ಟ ಸಿಕ್ಕಿತ್ತು. ಇದೇ ವಿಚಾರವಾಗಿ ಚೈತ್ರಾ ಅವರ ತಾಯಿ ಮಾತಾಡಿ, ನನ್ನ ಮಗಳಿಗೆ ಇಷ್ಟು ವಾರದಲ್ಲಿ ಕಳಪೆ ಕೊಟ್ಟಿದ್ದೀರಾ. ಆದರೆ ನಮ್ಮ ಮಗಳು ಯಾವತ್ತಿದ್ರೂ ನಮಗೆ ಉತ್ತಮನೇ ಎಂದು ಹೇಳಿ ಮೆಡಲ್ ಹಾಕಿದ್ದಾರೆ. ಈ ವೇಳೆ ಚೈತ್ರಾ ಭಾವುಕರಾಗಿದ್ದಾರೆ.
ಇದಾದ ಬಳಿಕ ಮಾತಾಡಿದ ಚೈತ್ರಾ, ನನ್ನ ತಂಗಿ ಹುಟ್ಟಿದ್ದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಯಿತು. 3ನೇಯದು ಹೆಣ್ಣಾಯ್ತು, ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡೋಕು ಇವರ ಮನೆಯಲ್ಲಿ ಗಂಡು ದಿಕ್ಕಿಲ್ಲ ಅಂತ ಜನ ಆಡಿಕೊಂಡಿದ್ದರು ಎಂದು ಚೈತ್ರಾ ಕಣ್ಣೀರು ಹಾಕಿದ್ದಾರೆ. ಅವರ ಮಾತಿಗೆ ಮನೆ ಮಂದಿ ಕೂಡ ಎಮೋಷನಲ್ ಆದರು.