ಶಿವಮೊಗ್ಗ:- ಬಿಜೆಪಿಗೆ ನನ್ನ ಸ್ಪರ್ಧೆ ಭಯ ಹುಟ್ಟಿಸಿದೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಳೆದ ಬಾರಿಯ ಚುನಾವಣೆಗೂ ಈಗಿನ ಚುನಾವಣೆಗೂ ಬಹಳ ವ್ಯತ್ಯಾಸ ಕಾಣುತ್ತಿದೆ. ಚುನಾವಣಾ ಪ್ರಚಾರದ ವೇಳೆ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಬಾರಿ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ನನಗೆ ಬಹಳ ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈಗ ನಾವು ಏನು ಕೆಲಸ ಮಾಡಬೇಕು, ಯಾವ ರೀತಿ ಪ್ರಚಾರ ಮಾಡಬೇಕು ಆ ರೀತಿ ಮಾಡುತ್ತಿದ್ದೇವೆ. ನನಗೆ ಜನರ ಜೊತೆ ಇರಲು ಇಷ್ಟ. ನನ್ನ ಎದುರಾಳಿ ಯಾರು ಎಂದು ಯೋಚನೆ ಮಾಡಲ್ಲ. ನಾನು ನನ್ನ ಪ್ರಚಾರ ಅಷ್ಟೇ ಮಾಡ್ತಿದ್ದೇನೆ. ನಾನು ವೀಕ್ ಅಭ್ಯರ್ಥಿ ಅಲ್ಲ, ನನ್ನ ಸ್ಪರ್ಧೆಯಿಂದ ಅವರಿಗೆ ಭಯ ಆಗಿದೆ. ಶಿವರಾಜ್ಕುಮಾರ್ ಅಭಿಮಾನಿಗಳು ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದರು.