ಬಳ್ಳಾರಿ:- ನಾಳೆ ಎರಡನೇ ಹಂತದ ಮತದಾನ ಹಿನ್ನೆಲೆ ಬಳ್ಳಾರಿ ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ.
ಚುನಾವಣಾ ಸಿಬ್ಬಂದಿಗೆ ಮತ ಪೆಟ್ಟಿಗೆ ಹಂಚಿಕೆ ಮಾಡಲಾಗಿದ್ದು, ಇಂದು ಮುಂಜಾನೆಯಿಂದಲೇ ಆಯಾ ಮತಗಟ್ಟೆಗಳಿಗೆ ಕಳಿಸುವ ಪ್ರಕ್ರಿಯೆ ಜರುಗಿದೆ. ಬಳ್ಳಾರಿ ಜಿಲ್ಲೆಯ ಐದು ಕಡೆ ಮಸ್ಟರಿಂಗ್ ಕೆಲಸ ನಡೆದಿದ್ದು, ಬಳ್ಳಾರಿಯ ಸೇಂಟ್ ಜಾನ್ಸ್ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕಂಪ್ಲಿಯ ಸೇಂಟ್ ಫಿಲೋಮಿನಾ ಪಬ್ಲಿಕ್ ಸ್ಕೂಲ್, ಕೊಪ್ಪಳ ಕ್ಷೇತ್ರದ ವ್ಯಾಪ್ತಿಯ ಸಿರಗುಪ್ಪದ ಸ್ವಾಮಿ ವಿವೇಕಾನಂದ ಶಾಲೆ, ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಸ್ಟರಿಂಗ್ ಪ್ರೋಸೆಸ್, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1972 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.
ಮಾಸ್ಟರಿಂಗ್ ಕೇಂದ್ರದಲ್ಲಿ ಊಟದ ವ್ಯವಸ್ಥೆ ಮಾಡಿದ್ದು, ಒಟ್ಟು 9474 ಚುನಾವಣಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಸರ್ಕಾರಿ ಬಸ್ಸ್ ಗಳಲ್ಲಿ ಸಿಬ್ಬಂದಿಗಳು ತೆರಳಲು ಅವಕಾಶ ಮಾಡಲಾಗಿದೆ. ಸಂಜೆಯೊಳಗೆ ನಿಗದಿತ ಕೆಂದ್ರಕ್ಕೆ ತಲುಪಲು ಸಕಲ ಸೌಲಭ್ಯಗಳು ರೆಡಿ ಆಗಿದೆ,