ಬಿಗ್ ಬಾಸ್ ಮನೆಗೆ ಶೃಂಗೇರಿಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದಾರೆ. ಇವರನ್ನು ಕಂಡ ಸ್ಪರ್ಧಿಗಳು ಸಂತಸದಿಂದ ಗುರೂಜಿಗೆ ಆಶೀರ್ವಾದ ಪಡೆಯತ್ತಾರೆ. ಆದರೆ ಇವರು ನುಡಿದ ಭವಿಷ್ಯ ವಾಣಿಯಿಂದ ಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ. ಶೃಂಗೇರಿಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಸ್ಪರ್ಧಿಗಳ ಎದುರು ಕುಳಿತು ಭವಿಷ್ಯ ಹೇಳಿದ್ದಾರೆ.
ವರ್ತೂರು ಸಂತೋಷ್ ಅವರನ್ನು ಕರೆಸಿಕೊಂಡ ಗುರೂಜಿ, ಕಾಲಿನ ಮೇಲೆ ಹಾಕಿಸಿಕೊಳ್ಳಬಾರದ ಜಾಗದಲ್ಲಿ ಟ್ಯಾಟೂವೊಂದಿದೆ. ಆ ಟ್ಯಾಟೂ ಹಾಕಿಸಿದ ಬಳಿಕ ಮನಸ್ಸಿನಲ್ಲಿದ್ದ ನೆಮ್ಮದಿ ಹೋಯ್ತು ಎಂದಿದ್ದಾರೆ. ಅದಕ್ಕೆ ವರ್ತೂರು ಹೌದು ಎಂದಿದ್ದಾರೆ. ನಮ್ರತಾ ಅವರನ್ನು ಕರೆಸಿಕೊಂಡ ಗುರೂಜಿ, ನಿಮ್ಮ ಜೀವನದಲ್ಲಿ ಹೊಸ ಬೆಳಕು ಮತ್ತು ಹೊಸ ವ್ಯಕ್ತಿಯ ಆಗಮನವಾಗಿದೆ ಎಂದು ಗುರೂಜಿ ಹೇಳಿದ್ದಾರೆ.
ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/W0knEi6mu9
— Colors Kannada (@ColorsKannada) January 2, 2024
ಡ್ರೋನ್ ಪ್ರತಾಪ್ ಅವರನ್ನು ಕರೆಸಿಕೊಂಡ ಗುರೂಜಿ, ಈ ವಿಚಾರವನ್ನು ಹೇಳಲು ಸಂಕಟವಾಗುತ್ತೆ. ನೀನು ಕುಟುಂಬದಿಂದ ದೂರ ಇರಬೇಕಾಗುತ್ತೆ. ಕುಟುಂಬದ ಜೀವನ ಯಾಕೋ ಅಷ್ಟು ಸರಿಯಿಲ್ಲ. ದೂರವಿದ್ದು ಧೂಪವಾಗುತ್ತಿಯೋ? ಹತ್ತಿರವಿದ್ದು ಹೇಸಿಗೆ ಆಗ್ತೀಯೋ? ನಿನಗೆ ಬಿಟ್ಟದ್ದು ಎಂದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭವಿಷ್ಯ ಹೇಳಿದ್ದಾರೆ. ಇದನ್ನು ಕೇಳಿ ಡ್ರೋನ್ ಪ್ರತಾಪ್ ಶಾಕ್ ಆದರು. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.