ಬೆಂಗಳೂರು: ಸಿದ್ದರಾಮಯ್ಯ ಬಂದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಕ್ಯಾನ್ಸರ್, ಕಾಂಗ್ರೆಸ್ ಬಂದ ಬಳಿಕ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ.
ಲಾಲ್ ಬಾಗ್, ವಿಧಾನಸೌಧ ನಮ್ಮದು ಎಂದು ಹೇಳುತ್ತಿದ್ದಾರೆ. ಒಳ್ಳೊಳ್ಳೆ ಜಮೀನು ಇರುತ್ತದೆ ಅದು ವಕ್ಫ್ ಬೋರ್ಡ್ ಆಗಿದೆ. ಬಡವರು, ರೈತರು ಕಂಗಾಲಾಗಿದ್ದಾರೆ. ಸಿದ್ದರಾಮಯ್ಯ ಬಂದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯ ಮುಸ್ಲಿಮರ ಚಾಂಪಿಯನ್ ಆಗಲು ಹೊರಟಿದ್ದಾರೆ ಎಂದರು.
Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್ʼಗಳೇನು ಗೊತ್ತಾ..?
ರೈತರ ಜಮೀನು ಕಿತ್ತುಕೊಳ್ಳುವುದು ಕಾಂಗ್ರೆಸ್ ಸಣ್ಣ ವಿಚಾರ. ಕಾಂಗ್ರೆಸ್ ಅಧಿಕಾರದಲ್ಲಿ ಮುಸ್ಲಿಮರ ಓಲೈಕೆ ಆಗುತ್ತಿದೆ. ಅವರ ವಿರುದ್ಧದ ಪ್ರಕರಣ ವಾಪಸ್ ಪಡೆಯಲಾಗ್ತಿದೆ. ನಾವಿದ್ದಾಗ ನಕ್ಸಲ್ ಇರಲಿಲ್ಲ. ಇವಾಗ ನಗರ ನಕ್ಸಲರು, ಕಾಡಲ್ಲಿ ನಕ್ಸಲರು ಬಂದಿದ್ದಾರೆ ಎಂದರು. ಕಾಂಗ್ರೆಸ್ ಬಂದರೆ ನಕ್ಸಲರಿಗೆ, ಲವ್ ಜಿಹಾದಿಗಳಿಗೆ ಹಬ್ಬ. ವಕ್ಫ್ ಬೋರ್ಡ್ ಗೆ ನ್ಯಾಯಾಂಗದ ಅಧಿಕಾರ ಕೊಡಲಾಗಿದೆ. ರಾಜ್ಯದಲ್ಲಿ ತಮ್ಮ ಜಮೀನನ್ನು ರೈತರು ಹುಡುಕುತ್ತಿದ್ದಾರೆ ಎಂದು ಹೇಳಿದರು.