ಹಾವೇರಿ: ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದ ಅನ್ಯ ಕೋಮಿನ ವ್ಯಕ್ತಿ ಮತ್ತು ಮಹಿಳೆ ಮೇಲೆ ಮುಸ್ಲಿಂ ಯುವಕರು ದಾಳಿ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿ ನೈತಿಕ ಪೊಲೀಸ್ಗಿರಿ ನಡೆಸಿರುವ ಘಟನೆ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ನಲ್ಲಿ ನಡೆದಿದೆ. ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್ನಲ್ಲಿರುವ ಲಾಡ್ಜ್ನಲ್ಲಿ ಶಿರಸಿ ಮೂಲದ ಹಿಂದು ವ್ಯಕ್ತಿ ಹಾಗೂ ವಿವಾಹಿತ ಮುಸ್ಲಿಂ ಮಹಿಳೆ ಮಧ್ಯಾಹ್ನದ ವೇಳೆಗೆ ರೂಮ್ ಪಡೆದು ವಾಸವಾಗಿದ್ದಾರೆ.
ಬುರ್ಕಾ ಹಾಕಿಕೊಂಡು ಅನ್ಯಕೋಮಿನ ಪುರುಷನ ಜತೆ ಲಾಡ್ಜ್ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಗಮನಿಸಿದ್ದ ಆಟೋ ಚಾಲಕ ಮುಸ್ಲಿಂ ಸಮುದಾಯದ ಯುವಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಅರ್ಧಗಂಟೆಯಲ್ಲೇ ಜಮಾಯಿಸಿದ ಅಕ್ಕಿ ಆಲೂರಿನ ನಾಲ್ಕೈದು ಮುಸ್ಲಿಂ ಯುವಕರ ತಂಡ ಲಾಡ್ಜ್ನ ಕೊಠಡಿಗೆ ತೆರಳಿ ರೂಮ್ನಲ್ಲಿ ನೀರಿನ ಸಮಸ್ಯೆ ಇದೆ.
Lakshadweep Trip: ಲಕ್ಷದ್ವೀಪದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು ಗೊತ್ತಾ..?
ಸರಿಪಡಿಸಬೇಕು ಬಾಗಿಲು ತೆಗೆಯಿರಿ ಎಂದಿದ್ದಾರೆ. ಆಗ ಒಳಗಿದ್ದವರು ನೀರು ಬರುತ್ತಿದೆ ಎಂದರೂ ಪದೆಪದೇ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆದ ತಕ್ಷಣ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಅಲ್ಲದೇ ಮಹಿಳೆಯನ್ನು ಎಳದಾಡಿ ಬಟ್ಟೆ ಹರಿದು ಹೊಡೆದಿರುವ ವಿಡಿಯೂ ವೈರಲ್ ಆಗಿದ್ದು, ದೂರು ಸಹ ದಾಖಲಾಗಿದೆ.