ದಾವಣಗೆರೆ:- ಮುಸ್ಲಿಂ ಯುವಕ ಅಯ್ಯಪ್ಪಸ್ವಾಮಿ ಮಾಲೆ ಧರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಡಿನ್ನರ್ ಹೊಸತೇನು ಅಲ್ಲ, ನಮ್ಮಲ್ಲಿ ಮುಸುಕಿನ ಗುದ್ದಾಟ ಏನಿಲ್ಲ: ಸತೀಶ್ ಜಾರಕಿಹೊಳಿ!
ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳ್ಳಿಗನೂರು ಗ್ರಾಮದ ಶಫೀವುಲ್ಲಾ ಅಯ್ಯಪ್ಪಸ್ವಾಮಿ ಮಾಲೆ ಧರಸಿ ಶಬರಿ ಮಲೆ ಯಾತ್ರೆ ಮಾಡಿದ ಯುವಕ. ಗೃಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿ ಆಗಲಿ ಎಂದು ಶಫೀವುಲ್ಲಾ ಅಯ್ಯಪ್ಪನಿಗೆ ಹರಕೆ ಹೊತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಿರಂತರ ಮಾಲೆ ಧರಿಸುತ್ತಿರುವ ಶಫೀವುಲ್ಲಾ, ಬೆಳ್ಳಿಗನೂರ ಗ್ರಾಪಂ ಗೃಂಥಾಲಯ ಮೇಲ್ವಿಚಾರಕನಾಗಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನಿಷ್ಠ ವೇತನಕ್ಕೆ ಹರಕೆ ಹೊತ್ತ ಮೂರೇ ತಿಂಗಳಿನಲ್ಲಿ ಗೃಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿ ಮಾಡಲಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ಮಾಲೆ ಹಾಕಲು ಶಫೀವುಲ್ಲಾ ನಿರ್ಧರಿಸಿದ್ದಾರೆ.
ಮುಸ್ಲಿಂ ಯುವಕ ಶಫೀವುಲ್ಲಾ ಅಯ್ಯಪ್ಪಸ್ವಾಮಿ ಮಾಲೆ ಹಾಕಿದರೆ ಇತ್ತ ಇದೇ ಜಿಲ್ಲೆಯ ಜಗಳೂರು ತಾಲ್ಲೂಕಿನ ಮರೇನಹಳ್ಳಿ ಗ್ರಾಮದ ಶೌಕತ್ ಆಲಿ, ಆಪ್ರೋಜ್ ಮತ್ತು ಅಮೀದ್ ಕುಟುಂಬಸ್ಥರಿಂದ ಅಯ್ಯಪ್ಪಸ್ವಾಮಿ ಪಡಿಪೂಜೆ ಹಾಗೂ ಅನ್ನಸಂತರ್ಪಣೆ ಮಾಡಲಾಗಿದೆ. ಆ ಮೂಲಕ ಮುಸ್ಲಿಂ ಕುಟುಂಬಗಳು ಭಾವೈಕ್ಯತೆ ಸಂದೇಶ ರ