ಅಸ್ಸಾಂ: ಮುಸ್ಲಿಮ್ ಹುಡುಗಿಯರು, ಯುವತಿಯರಿಕೆ ಖಡಕ್ ಸಂದೇಶ ರವಾನಿಸುವ ಮೂಲಕ AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮತ್ತೆ ಸುದ್ದಿಯಾಗಿದ್ದಾರೆ. ಅಸ್ಸಾಂನ ಬಾರ್ಪೇಟ್ನಲ್ಲಿ ಅಜ್ಮಲ್ ಸೂಪರ್ 40 ಫೌಂಡೇಶನ್ ಮುಸ್ಲಿಮ್ ಸಮುದಾಯಕ್ಕೆ ಕಾರ್ಯಕ್ರಮ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಅಜ್ಮಲ್ ಗರಂ ಆಗಿದ್ದಾರೆ. ಮುಸ್ಲಿಮ್ ಹುಡುಗಿಯರು ಲಿಪ್ಸ್ಟಿಕ್, ಮೇಕ್ಅಪ್ ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇಲ್ಲಿ ಯಾವುದೇ ಹೀರೋ ಬರುತ್ತಿಲ್ಲ. ಇದು ಶೈಕ್ಷಣಿಕೆ ಕಾರ್ಯಕ್ರಮ ಎಂದು ಎಚ್ಚರಿಸಿದ್ದಾರೆ.
Swollen feet in Winter : ಚಳಿಗಾಲದಲ್ಲಿ ಊದಿಕೊಂಡ ಪಾದಗಳಿಗೆ ಈ ಮನೆ ಮದ್ದನ್ನು ಉಪಯೋಗಿಸಿ!
ಧುರ್ಬಿ ಕ್ಷೇತ್ರದ ಸಂಸದರಾಗಿರುವ ಬದ್ರುದ್ದೀನ್ ಅಜ್ಮಲ್, ಮುಸ್ಲಿಂ ಹುಡುಗಿಯರು ಇತರ ವಿಷಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದು ತಪ್ಪು, ಲಿಪ್ಸ್ಟಿಕ್, ಮೇಕ್ಅಪ್ನಲ್ಲಿ ಕಾಲಕಳೆಯುವುದಲ್ಲ. ಇಲ್ಲಿಗೆ ಯಾರೆಲ್ಲಾ ಲಿಪ್ ಸ್ಟಿಕ್,
ಮೇಕ್ಅಪ್ ಮಾಡಿಕೊಂಡು ಬಂದಿದ್ದಾರೋ ಅವರಿಗೆಲ್ಲಾ ಮದುವೆ ಪ್ರಸ್ತಾಪ ಕಳುಹಿಸುತ್ತೇನೆ. ಪೋಷಕರೇ ನೀವು ಈ ಕುರಿತು ಎಚ್ಚರವಹಿಸಬೇಕು ಎಂದು ಅಜ್ಮಲ್ ಹೇಳಿದ್ದಾರೆ. ಇದೇ ವೇಳೆ ಹಿಜಾಬ್ ಧರಿಸಿದ ಆಗಮಿಸಿದ ಹಲವು ಮುಸ್ಲಿಮ್ ಯುವತಿಯರಿಗೆ ಹಾಗೂ ಅವರ ಪೋಷಕರಿಗೆ ಬದ್ರುದ್ದೀನ್ ಅಜ್ಮಲ್ ನೋಟಿಸ್ ನೀಡಿದ್ದಾರೆ.