ಜಬ್ ವೀ ಮೇಟ್’ ಸಿನಿಮಾ ಖ್ಯಾತಿಯ ಸಿಂಗರ್ ಉಸ್ತಾದ್ ರಶೀದ್ ಖಾನ್ (55) ಅವರು ಇಂದು (ಜ.9) ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ. ಕೊಲ್ಕತ್ತಾದ ಟಾಟಾ ಮೆಮೊರಿಯಲ್ ಆಸ್ಪತ್ರೆಯಲ್ಲಿ ಸಂಗೀತ ಮಾಂತ್ರಿಕ ಉಸ್ತಾದ್ ಇಹಲೋಕ ತ್ಯಜಿಸಿದ್ದಾರೆ.
ಬಾಲಿವುಡ್ನ (Bollywood) ಸಾಕಷ್ಟು ಹಾಡುಗಳಿಗೆ ಧ್ವನಿಯಾಗಿದ್ದ ಉಸ್ತಾದ್ ರಶೀದ್ ಖಾನ್ (Ustad Rashid Khan) ಅವರು ಕೆಲ ಸಮಯದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ದೀರ್ಘಕಾಲದಿಂದ ವೆಂಟಿಲೇಟರ್ನಲ್ಲಿ ಇದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಉಸ್ತಾದ್ ನಿಧನರಾಗಿದ್ದಾರೆ
ಗಾಯಕ ಉಸ್ತಾದ್ ರಶೀದ್ ಖಾನ್ ನಿಧನದ ಬಗ್ಗೆ ವೆಸ್ಟ್ ಬೆಂಗಾಲ್ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಇಡೀ ದೇಶಕ್ಕೆ ಮತ್ತು ಮ್ಯೂಸಿಕ್ ಬಂಧುಗಳಿಗೆ ಅವರ ನಿಧನದಿಂದ ನಷ್ಟವಾಗಿದೆ. ರಶೀದ್ ಇನ್ನಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ