ಚಿತ್ರದುರ್ಗ:- ಜೈಲಿನಿಂದ ಮುರುಘಾಶ್ರೀಗೆ ಬಿಡುಗಡೆ ಭಾಗ್ಯ ದೊರೆತಿದ್ದು, ಬೆಂಬಲಿಗರಿಂದ ಸಂಭ್ರಮಾಚರಣೆ ಮನೆ ಮಾಡಿದೆ.
ಜೈಲಿನಿಂದ ಬಿಡುಗಡೆಯಾದ ಮುರುಘಾಶ್ರೀ ಸ್ವಾಗತಿಸಲು ಮುರುಘಾ ಮಠದ ಉಸ್ತುವಾರಿಯಾಗಿದ್ದ ಬಸವ ಪ್ರಭು ಶ್ರೀ ಮತ್ತು ಉತ್ತರಾಧಿಕಾರಿ ಬಸವಾದಿತ್ಯ ಜೈಲಿಗೆ ಧಾವಿಸಿದ್ದರು. ಬಿಡುಗಡೆಯಾದ ಮುರುಘಾಶ್ರೀ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಅಲ್ಲದೇ ಅವರ ಬೆಂಬಲಿಗರು ಹೂವಿನಹಾರ ಹಾಕುವ ಮೂಲಕ ಜಯಘೋಷ ಕೂಗಿದರು. ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿದರು.
ಬಳಿಕ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗುನಗುತ್ತಾ ಮುರುಘಾಶ್ರೀ ನಗುನಗುತ್ತಾ ತೆರಳಿದರು. ಮುರುಘಾ ಮಠದ ಮುಂದೆ ಸಾಗುತ್ತಾ ರಸ್ತೆ ಬದಿ ನಿಂತಿದ್ದ ಜನರತ್ತ ಮುರುಘಾಶ್ರೀ ಕೈ ಬೀಸಿದರು.
ಈ ವೇಳೆ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮುರುಘಾಶ್ರೀ, ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ. ಶರಣಸಂಸ್ಕ್ರತಿ ಉತ್ಸವದ ಸಂಭ್ರಮಾಚರಣೆ ವೇಳೆ ಬಿಡುಗಡೆಯಾಗಿರುವ ಕುರಿತು ನಾವು ಯೋಚಿಸಿ ಹೆಜ್ಜೆಇಡುತ್ತೇವೆ. ಈಗ ಮಾತನಾಡಲು ಸಕಾಲವಲ್ಲ. ಮೌನವಹಿಸುವ ಕಾಲ ಎಂದಷ್ಟೇ ಹೇಳುತ್ತೇವೆ ಎಂದರು.