ವಾಷಿಂಗ್ಟನ್: ಅಮೆರಿಕದ (America) ಅಲಬಾಮಾ (Alabama) ರಾಜ್ಯವು ಗುರುವಾರ ನೈಟ್ರೋಜನ್ ಅನಿಲವನ್ನು (Nitrogen Gas) ಬಳಸಿ ಅಪರಾಧಿ ಕೊಲೆಗಾರನನ್ನು ಮರಣದಂಡನೆಗೆ (Execution) ಒಳಪಡಿಸಿದೆ. ಮಾರಣಾಂತಿಕ ಚುಚ್ಚುಮದ್ದಿನ ನಂತರ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹೊಸ ಮರಣದಂಡನೆ ವಿಧಾನವನ್ನು ಬಳಸಲಾಗಿದೆ.
ಕೆನ್ನೆತ್ ಯುಜೀನ್ ಸ್ಮಿತ್ನನ್ನು (Kenneth Eugene Smith) ಅಲಬಾಮಾದ ಹಾಲ್ಮನ್ ಜೈಲಿನಲ್ಲಿ ನೈಟ್ರೋಜನ್ ಹೈಪೋಕ್ಸಿಯಾದಿಂದ ಗಲ್ಲಿಗೇರಿಸಲಾಯಿತು. ನೈಟ್ರೋಜನ್ ಹೈಪೋಕ್ಸಿಯಾದಿಂದ ಕೆನ್ನೆತ್ ಯುಜೀನ್ ಸ್ಮಿತ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಒಕ್ಲಹೋಮ ಮತ್ತು ಮಿಸ್ಸಿಸ್ಸಿಪ್ಪಿ ಜೊತೆಗೆ ಸಾರಜನಕ ಹೈಪೋಕ್ಸಿಯಾವನ್ನು ಮರಣದಂಡನೆಯ ವಿಧಾನವಾಗಿ ಬಳಸಲು ಅನುಮೋದಿಸಿದ ಮೂರು ಯುಎಸ್ ರಾಜ್ಯಗಳಲ್ಲಿ ಅಲಬಾಮಾ ಒಂದಾಗಿದೆ.
1999ರಲ್ಲಿ ಕೊನೆಯದಾಗಿ ಹೈಡ್ರೋಜನ್ ಸೈನೈಡ್ ಅನಿಲವನ್ನು ಬಳಸಿಕೊಂಡು ಅಪರಾಧಿ ಕೊಲೆಗಾರನನ್ನು ಮರಣದಂಡನೆಗೆ ಒಳಪಡಿಸಲಾಗಿತ್ತು
ನೈಟ್ರೋಜನ್ ಹೈಪೋಕ್ಸಿಯಾವು ವ್ಯಕ್ತಿಯನ್ನು ಸಾರಜನಕವನ್ನು ಮಾತ್ರ ಉಸಿರಾಡುವಂತೆ ಮಾಡುತ್ತದೆ. ಮಾನವ ದೇಹಕ್ಕೆ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಆಮ್ಲಜನಕವನ್ನು ವ್ಯಕ್ತಿಯಿಂದ ಕಸಿದುಕೊಳ್ಳುತ್ತದೆ.