ಕೋಲಾರ:-ಅಪ್ರಾಪ್ತ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಬಾಲಕ ಕಾರ್ತಿಕ್ ಸಿಂಗ್ ಕುಟುಂಬಸ್ಥರು ಹಾಗೂ ಸಂಬಂದಿಕರಿಂದ ಪ್ರತಿಭಟನೆ ಜರುಗಿದೆ. ಕೋಲಾರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆದಿದೆ.
ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಇತೇಂದ್ರ, ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಅವರಿಂದ ಕೋಲಾರದ ಎಸ್ಪಿ ಕಛೇರಿಯಲ್ಲಿ ಸಭೆ ನಡೆದಿದೆ.