ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ದರ್ಶನ್ ರ ಬಂಧನ ಅವಧಿ ಮುಕ್ತಾಯ ಆಗಲಿದೆ. ಹೀಗಾಗಿ ದರ್ಶನ್ ಜಾಮೀನು ಅರ್ಜಿ
ತಯಾರಿ ನಡೆಸಿದ್ದಾರೆ.
ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್ ಫಿಟ್ನೆಸ್ ಮೇಂಟೇನ್ ಮಾಡಲು ಒದ್ದಾಡ್ತಿದ್ದಾರೆ. ಜಿಮ್ನಲ್ಲಿ ಬೆವರು ಹರಿಸಲು ಅವಕಾಶ ಸಿಗದ ಕಾರಣ ಊಟದ ಮೆನು ಬದಲಿಸಿದ್ದಾರೆ. ಅನ್ನ ಬಿಟ್ಟು ಚಪಾತಿ, ಮುದ್ದೆ ಊಟಕ್ಕೆ ಮೊರೆ ಹೋಗಿದ್ದಾರೆ. ಜೊತೆಗೆ ವಿಟಮಿನ್ ಟ್ಯಾಬ್ಲೆಟ್ಗಳನ್ನು ದರ್ಶನ್ ಸೇವಿಸ್ತಿದ್ದಾರೆ. ಇನ್ನು, ದರ್ಶನ್ ಮಾತ್ರವಲ್ಲ ಡಿ ಗ್ಯಾಂಗ್ನ ಉಳಿದ ಸದಸ್ಯರು ಜಾಮೀನು ಪಡೆಯಲು ಕಸರತ್ತು ನಡೆಸಿದ್ದಾರೆ. ಎ1 ಪವಿತ್ರಾಗೌಡ, ಎ7 ಅನುಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಾಳೆ ಇಬ್ಬರ ಅರ್ಜಿಗಳು ವಿಚಾರಣೆಗೆ ಬರುವ ಸಂಭವ ಇದೆ.
ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಜೊತೆ ಜಾಮೀನು ಸರ್ಜಿ ಸಲ್ಲಿಕೆ ಮಾಡುವ ಕುರಿತು ದರ್ಶನ್ ಚರ್ಚೆ ಮಾಡಿದ್ದಾರೆ. ಆದ್ದರಿಂದ ಸೆ.9 ಅಥವಾ ಸೆ.10ರಂದು ಎಸಿಎಂಎಂ ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ