ಬೆಂಗಳೂರು:- ನಟ ದರ್ಶನ್ ಬಂಧನ ವಿಚಾರವಾಗಿ ನಟಿ ಶೃತಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾಲಿನ ದರ ಹೆಚ್ಚಳ.. ಆಡಳಿತ ಪಕ್ಷದ ಬಗ್ಗೆ ದೇಶಪಾಂಡೆ ಹೇಳಿದ್ದೇನು!?
ನಟ ದರ್ಶನ್ ಕಷ್ಟದಿಂದ ಬೆಳೆದವರು. ಸಿನಿಮಾ ದರ್ಶನ್ ಹಾರ್ಡ್ ವರ್ಕ್ ಮಾಡ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಎನ್ನುವ ಜವಾಬ್ದಾರಿ ಅವರಿಗೆ ಇದೆ. ಮೈಕಟ್ಟಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಇಂತಹ ಪ್ರಕರಣದಲ್ಲಿ ದರ್ಶನ್ ಸಿಲುಕಿದ ವಿಚಾರ ಕೇಳಿ ಶಾಕ್ ಆಯ್ತು. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಸಿಗಬೇಕು ಎಂದ್ರು.
ಇದನ್ನು ಯಾರು ಕೂಡ ಊಹೆ ಮಾಡಿರಲಿಲ್ಲ. ಈ ಪ್ರಕರಣ 2 ಫ್ಯಾಮಿಲಿ ಸಂಬಂಧಿಸಿದ್ದು ಮಾತ್ರವಲ್ಲ ಇದ್ರಿಂದ ಇಡೀ ಫ್ಯಾಮಿಲಿ ಮಂಕಾಗಿದೆ ಎಂದ್ರು. ಕಾಟೇರ ಸಿನಿಮಾದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡೋ ಅವಕಾಶ ಸಿಕ್ತು. ಅದಕ್ಕೂ ಮೊದಲು ʼಎಲ್ಲರ ಮನೆ ದೋಸೆ ತೂತುʼ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ. ನನ್ನ ಕೊನೆಯ ತಮ್ಮನ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ರು. ದರ್ಶನ್ ಸರಳ ವ್ಯಕ್ತಿತ್ವ ಹೊಂದಿರುವವರು ಎಂದ್ರು.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ. ಕೆಟ್ಟ ಕಮೆಂಟ್ ನೋಡಿ ನೊಂದು ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಕಮೆಂಟ್ ಮಾಡುವವರು ಬಳಸುವ ಪದಗಳನ್ನ ಜೀರ್ಣಿಸಿಕೊಳ್ಳೋದು ಕಷ್ಟ ಎಂದ್ರು