ಕಲಬುರಗಿ : ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಹಿಳೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕೃಷ್ಣಾ, ಕಳೆದ ಮೂರ್ನಾಲ್ಕು ದಿನದಿಂದ ರೋಜಾ ಠಾಣೆ ಪೊಲೀಸರ ವಶದಲ್ಲಿದ್ದನು. ಜ.24 ರಂದು ಮಿಜಗುರಿ ಕ್ರಾಸ್ನಿಂದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ತಾಯಿ ಮೈನಾಬಾಯಿ ಪುತ್ರ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಮೈನಾಬಾಯಿ ಕರೆದೊಯ್ಯುವ ಸಿಸಿಟವಿ ಪತ್ತೆಯಾಗಿತ್ತು. ಸಿಸಿಟಿವಿಯ ದೃಶ್ಯದ ಆಧಾರದ ಮೇಲೆ ಪೊಲೀಸರು ಕೃಷ್ಣಾ ನನ್ನ ವಶಕ್ಕೆ ಪಡೆದಿದ್ದರು.
ಕೊಲೆ ಮಾಡಿದ ಜಾಗ ತೋರಿಸುವದಾಗಿ ಹೇಳಿದ್ದರಿಂದಾಗಿ ಆ ಜಾಗಕ್ಕೆ ಕರೆದೊಯ್ದಿದ್ದರು. ಇದೇ ವೇಳೆ ಆರೋಪಿಯ ಕೈಯಿಂದಲೇ ಶವವನ್ನ ಮೇಲೆತ್ತಲು ಪೊಲೀಸರು ಮುಂದಾಗಿದ್ದರು. ಬಳಿಕ ಕೃಷ್ಣಾ ರಾಠೋಡ್ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಕೃಷ್ಣಾ ರಾಠೋಡ್ ಕೊನೆಯುಸಿರೆಳೆದಿದ್ದಾನೆ.
ಇನ್ನೊಂದೆಡೆ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಕಂಬದಲ್ಲಿ ಕೆಲಸ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ಹಿರೇಹುಲ್ಲಾಳದಲ್ಲಿ ಘಟನೆ ನಡೆದಿದ್ದಾನೆ. ಹಿರೆಹುಲ್ಲಾಳ ಗ್ರಾಮದ ಕಾಶಿನಾಥ ಗುಡ್ಡಪ್ಪ ಕಮ್ಮಾರ 32 ಸಾವನ್ನಪ್ಪಿದ್ದಾನೆ.