ಬೆಂಗಳೂರು: ಉಪ್ಪು ತಿಂದವರು ನೀರು ಕುಡಿಯಬೇಕೆಂಬ ಸ್ಥಿತಿ ಮುನಿರತ್ನಗೆ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬಾಯಿಗೆ ಬಂದ ಹಾಗೆ ಆರೋಪ ಮಾಡುತ್ತಿದ್ದಾರೆ. ಸಿ.ಟಿ.ರವಿ, ಮುನಿರತ್ನ ಪ್ರಕರಣದಲ್ಲಿ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ.
Toe Ring: ವಿವಾಹಿತ ಮಹಿಳೆಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಈ ರೀತಿಯ ಕಾಲುಂಗುರ ಹಾಕಬಾರದು!
ಕಪೋಕಲ್ಪಿತ ಮಾತುಗಳನ್ನು ಸೇರಿಸುವುದು ಯಾವ ನ್ಯಾಯ? ಪಾಪ, ಕುಸುಮಾ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕೆಂಬ ಸ್ಥಿತಿ ಮುನಿರತ್ನಗೆ ಬಂದಿದೆ. ಸುಳ್ಳು, ಕರುಣೆ ಬರುವ ರೀತಿ ಸನ್ನಿವೇಶ ಸೃಷ್ಟಿ ಮಾಡುವ ಕಲಾವಿದರು ಇವರು. ಜನರಿಗೆ ಇದು ಮನೋರಂಜನೆ, ನಿಜಾಂಶ ಜನರಿಗೆ ಗೊತ್ತಿದೆ ಎಂದು ಗುಂಡೂರಾವ್ ಹೇಳಿದರು.