ಗದಗ : ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷ ಚುನವಾಣೆ ವಿಳಂಬ ಖಂಡಿಸಿ ನಗರಸಭೆಉ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಗದಗ ಎಸಿ ಕಚೇರಿ ಎದುರು ಗದಗ ಎಸಿ ವಿರುದ್ದ ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಂತೆ ವರ್ತಿಸುತ್ತಿರುವ ಎಸಿ ಗಂಗಪ್ಪ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಪ್ರತಿಭಟನೆ ವೇಳೆ ಸಿಪಿಐ ಡಿ ಬಿ ಪಾಟೀಲ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಕೂಡ ನಡೆಯಿತು. ಪ್ರತಿಭಟನೆ ನಡೆಸೋ ವೇಳೆ ಬಿಜೆಪಿ ಸದಸ್ಯರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ವಿಡಿಯೋ ಮಾಡಿ ಎಂದ ಸಿಪಿಐ ಡಿ ಬಿ ಪಾಟೀಲ್ ವಿರುದ್ದ ಬಿಜೆಪಿ ಸದಸ್ಯರು, ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ನಾವು ಸಾರ್ವಜನಿಕರಿಗೆ ದಾರಿ ಬಿಟ್ಟಿದ್ದೇವೆ ನೋಡಿ ಎಂದು ತಿರುಗೆಟು ನೀಡಿದ್ದು, ನೀವು ಈ ರೀತಿ ವರ್ತಿಸೋದು ಸರಿ ಅಲ್ಲ ಎಂದು ಸಿಪಿಐ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಏಕಾಏಕಿ ಪಾಳಾ ಬಾದಾಮಿ ರಸ್ತೆಗೆ ಇಳಿದ ಪ್ರತಿಭಟನಾಕಾರರು,ರಸ್ತೆಯ ಒಂದು ಭಾಗ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಡಿಸಿ ಬರುವಂತೆ ಪಟ್ಟು ಹಿಡಿದಿದ್ದಾರೆ. ಕಾನೂನು ಸಚಿವರ ತವರಲ್ಲಿ ಕಾನೂನು ಉಲ್ಲಂಘನೆಯಾಗಿದೆ ಅಂತಾ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.