ಬೀದರ್:- ರಾಜ್ಯದ ಪೌರಾಡಳಿತ ಸಚಿವರಿಗೆ ಎಷ್ಟು ಸಂಸದರಿದ್ದಾರೆ ಅನ್ನುವ ಬೇಸಿಕ್ ನಾಲೆಡ್ಜ್ ಇಲ್ಲದಿರುವುದು ಆಶ್ಚರ್ಯ ಸಂಗತಿ.
ಹೌದು, ರಾಜ್ಯದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಭಾಷಣದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಭಾಷಣದ ವೇಳೆ ರಾಜ್ಯದಲ್ಲಿ 25 ಸಂಸದ ಸ್ಥಾನಗಳಿವೆ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ಸಂಪುಟದ ಉನ್ನತ ಖಾತೆ ಪೌರಾಡಳಿತ ಸಚವರಿಂದ ಮಹಾ ಎಡವಟ್ಟು ಉಂಟಾಗಿದೆ.
ಸಾಮಾನ್ಯ ಮಾಹಿತಿಯೇ ಇಲ್ಲದ ಸಚಿವರು, ರಾಜ್ಯವನ್ನೇಗೆ ನಿಭಾಯಿಸ್ತಾರೆ..? ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಶಾಲಾ ಮಕ್ಕಳಿಗೆ ಇರುವ ಜ್ಞಾನವು ಸಚಿವರಿಗಿಲ್ವಾ..?ಎರಡು ಬಾರಿ ಸಚಿವ, ನಾಲ್ಕು ಬಾರೊ ಶಾಸಕರಾಗಿ ಆಯ್ಕೆ ಆಗಿರೋ ರಹೀಂ ಖಾನ್ ಗೆ ಸಾಮಾನ್ಯ ಜ್ಞಾನವೇ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಎಡವಟ್ಟು ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಸಭೆಯಲ್ಲಿ 25 ಕ್ಕೆ 25 ಸ್ಥಾನ ಗೆಲ್ತೇವೆ ಎಂದು ಹೇಳಿದ್ದಾರೆ. ಸಚಿವ ಈಶ್ವರ ಖಂಡ್ರೆ, ಸಚಿವ ಸಂತೋಷ್ ಲಾಡ್ ಎದುರಲ್ಲೆ ಸಚಿವ ರಹೀಂ ಖಾನ್ ಎಡವಟ್ಟು ಮಾಡಿಕೊಂಡಿದ್ದಾರೆ.
ಭಾಷಣದಲ್ಲಿ ತಪ್ಪು ಮಾತನಾಡುತ್ತಲೇ, ಅಟ್ಟಾವಿಸ್ (28) ಸ್ಥಾನಗಳಿವೆ ಎಂದು ಖಂಡ್ರೆ ತಿಳಿಹೇಳಿದ್ದಾರೆ. ಸಚಿವ ಖಂಡ್ರೆ ಹೇಳುತ್ತಲೆ 25 ಸ್ಥಾನ ಗೇಲ್ತೇವೆ ಎಂದ ಸಚಿವ ರಹೀಂ ಖಾನ್ ಹೇಳಿದ್ದಾರೆ. ರಾಜ್ಯದ ಸಂಸದ ಸ್ಥಾನಗಳ ಕುರಿತು ಸರಿಯಾದ ಮಾಹಿತಿ ಇಲ್ಲವೇ ಸಚಿವರಿಗೆ.?ರಾಜ್ಯದ ರಾಜಕೀಯ ಮಾಹಿತಿ ಇಲ್ಲದೆ ಇರೋ ರಾಜಕಾರಣಿಗೆ ಸಚಿವ ಸ್ಥಾನ ಬೇಕಾ…? ಎನ್ನುವ ಪ್ರಶ್ನೆ ಎಲ್ಲೆಡೆ ವ್ಯಕ್ತವಾಗಿದೆ.