ಲಖನೌ: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿದರೂ ಮತ್ತೆ ಸೋಲಿನ ಸುಳಿಯಲ್ಲಿ ಸಿಲುಕಿರುವ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೆ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಾಗಲಿದೆ. ಅತ್ತ ಲಖನೌ ಸೂಪರ್ ಜೈಂಟ್ಸ್ ಕೂಡಾ ಅಸ್ಥಿರ ಆಟ ಪ್ರದರ್ಶಿಸುತ್ತಿದ್ದು, ಗೆಲುವಿಗೆ ಕಾತರಿಸುತ್ತಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ. ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಗೆದ್ದರಷ್ಟೇ ತಂಡ ಪ್ಲೇ-ಆಫ್ ರೇಸ್ನಲ್ಲಿ ಉಳಿಯಲಿದ್ದು, ಸೋತರೆ ರೇಸ್ನಿಂದ ಹೊರಬೀಳುವುದು ಖಚಿತ. ಹೀಗಾಗಿ ಸುಧಾರಿತ ಪ್ರದರ್ಶನ ನೀಡಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಬ್ಯಾಟಿಂಗ್ ವಿಭಾಗ ಅಬ್ಬರಿಸುತ್ತಿದ್ದರೂ, ಬುಮ್ರಾ ಹೊರತುಪಡಿಸಿ ಇತರ ಬೌಲರ್ಗಳು ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ.
ಮತ್ತೊಂದೆಡೆ ಲಖನೌ ಆಡಿರುವ 9ರಲ್ಲಿ 5 ಪಂದ್ಯ ಗೆದ್ದಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡದ ಪ್ಲೇ-ಆಫ್ ಹಾದಿ ಸುಲಭವಾಗಲಿದ್ದು, ಸೋತರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಲಿದೆ. ಪ್ರಮುಖವಾಗಿ ಟಿ20 ವಿಶ್ವಕಪ್ ಆಯ್ಕೆ ರೇಸ್ನಲ್ಲಿರುವ ಕೆ.ಎಲ್.ರಾಹುಲ್ ಆಯ್ಕೆ ಸಮಿತಿಯ ಗಮನ ಸೆಳೆಯುವ ರೀತಿ ಪ್ರದರ್ಶನ ನೀಡಬೇಕಿದೆ.
ಒಟ್ಟು ಮುಖಾಮುಖಿ: 04
ಮುಂಬೈ: 01
ಲಖನೌ: 03
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ಪೀಯೂಸ್ ಚಾವ್ಲಾ, ಲ್ಯೂಕ್ ವುಡ್, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.
ಲಖನೌ: ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್(ನಾಯಕ), ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.
![](https://ainlivenews.com/wp-content/uploads/2024/01/Ad-Banner-copy-scaled.jpg)