ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಮೂರು ಸೋಲುಂಡಿದ್ದ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಇದೀಗ ಬ್ಯಾಕ್ ಟು ಬ್ಯಾಕ್ ಜಯದೊಂದಿಗೆ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಐಪಿಎಲ್ 2024 ಟೂರ್ನಿಯ ಆರಂಭದಲ್ಲಿ ಗುಜರಾತ್ ಟೈಟನ್ಸ್,
ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಎದುರು ಮುಗ್ಗರಿಸಿದ್ದ ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಇಂಡಿಯನ್ಸ್, ಇದೀಗ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಮಣಿಸಿ ಆತ್ಮವಿಶ್ವಾಸ ಮರಳಿ ಪಡೆದಿದೆ.
ಅದರಲ್ಲೂ ಆರ್ಸಿಬಿ ಎದುರು 197 ರನ್ಗಳ ಕಠಿಣ ಗುರಿಯನ್ನು ಕೇವಲ 15.3 ಓವರ್ಗಳಲ್ಲಿ ಕೇವಲ 3 ವಿಕೆಟ್ಗಳ ನಷ್ಟದೊಂದಿಗೆ ಮೆಟ್ಟಿನಿಲ್ಲುವ ಮೂಲಕ ಎದುರಾಳಿಗಳ ಮನದಲ್ಲಿ ಭಯ ಹುಟ್ಟುವಂತೆ ಮಾಡಿದೆ. ನಿಧಾನವಾಗಿ ತನ್ನ ನೈಜ ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ಆರಂಭಿಸಿರುವ ಮುಂಬೈ ಇಂಡಿಯನ್ಸ್ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್,
ಈ ಖಾಯಿಲೆ ಇರುವವರು ಪೇರಳೆ ಹಣ್ಣು ತಿನ್ನಲೇಬೇಡಿ..! ಅಪಾಯ ಕಟ್ಟಿಟ್ಟಬುತ್ತಿ
ತಂಡದಲ್ಲಿ ಒಂದಲ್ಲ ಎರಡಲ್ಲ ಒಟ್ಟು 6 ಮಂದಿ ಮ್ಯಾಚ್ ವಿನ್ನಿಂಗ್ ಹಾಗೂ ಎಕ್ಸ್ ಫ್ಯಾಕ್ಟರ್ ಆಟಗಾರರು ಇದ್ದಾರೆ ಎಂದು ಗುಣಗಾನ ಮಾಡಿದ್ದಾರೆ. ಪ್ರತಿ ತಂಡಗಳಲ್ಲಿ ಒಂದಿಬ್ಬರು ಎಕ್ಸ್ ಫ್ಯಾಕ್ಟರ್ ಆಟಗಾರರನ್ನು ಕಾಣಬಹುದು. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆರು ಮಂದಿ ಎಕ್ಸ್ ಫ್ಯಾಕ್ಟರ್ ಆಟಗಾರರು ಇದ್ದಾರೆ. ಈ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಮುಂಬೈ ತಂಡವನ್ನು ತಡೆದು ನಿಲ್ಲಿಸಲಾಗದು ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.