ಇಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹುಟ್ಟುಹಬ್ಬ. ಈ ವರ್ಷದ ಬರ್ತಡೇಯನ್ನು ಪ್ರಕಾಶ್ ರಾಜ್ ಲಡಾಕ್ ನಲ್ಲಿ ಆಚರಿಸಿಕೊಂಡಿದ್ದಾರೆ. ಅಲ್ಲದೆ ಜನ್ಮದಿನದಂದು ಒಂದೊಳ್ಳೆಯ ಕೆಲಸವನ್ನು ಮಾಡಿದ್ದಾರೆ.
ವಾಂಗ್ಚುಕ್ ಚಳವಳಿಯನ್ನು ಪ್ರಕಾಶ್ ರಾಝ್ ಬೆಂಬಲಿಸಿದ್ದಾರೆ. ಸ್ವತಃ ಚಳವಳಿ ನಡೆಯವ ಸ್ಥಳಕ್ಕೆ ತೆರಳಿರುವ ಪ್ರಕಾಶ್ ರಾಜ್, ‘ಇವರನ್ನು ಬೆಂಬಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ’ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
‘ಇಂದು ನನ್ನ ಬರ್ತ್ಡೇ. ಹೀಗಾಗಿ ನಾನು ಈ ದಿನವನ್ನು ಲೇಹ್ ಲಡಾಕ್ನಲ್ಲಿ ಕಳೆಯಲು ನಿರ್ಧರಿಸಿದೆ. ಈ ಜನ ತಮಗಾಗಿ ಹೋರಾಡುತ್ತಿಲ್ಲ. ಇಲ್ಲಿನ ಜನರು ನಮ್ಮ ದೇಶ, ನಮ್ಮ ಪರಿಸರ ಮತ್ತು ನಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲೋಣ’ ಎಂದು ವಿಡಿಯೋದಲ್ಲಿ ಹೇಳಿದ್ದು ಪ್ರಕಾಶ್ ರಾಜ್ ಶೇರ್ ಮಾಡಿರುವ ವಿಡಿಯೋದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ.
‘ಲಡಾಖ್ ಮತ್ತು ಹಿಮಾಲಯವನ್ನು ಉಳಿಸಿ’ ಎಂಬ ವಾಂಗ್ಚುಕ್ ಅವರ ಉಪವಾಸ 21 ದಿನಗಳನ್ನು ತಲುಪಿದೆ. ಪ್ರತಿಭಟನೆಗೆ ರಾಜಕೀಯ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಾಂಗ್ಚುಕ್ ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ಸಿನಿಮಾಗಳ ಜೊತೆಗೆ ಅನೇಕ ಸಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.