ಬೆಂಗಳೂರು:- ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಚರ್ಚೆ ಇರುವಂತಹ ಹಗರಣ ಮುಡಾ ಕೇಸ್. ಇದು ಸಿಎಂ ಇನ್ನಿಲ್ಲದ ಮುಖಭಂಗ ಮಾಡಿದೆ.
ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ನಡೆಸ್ತಿರುವ ತನಿಖೆ ಸಿಎಂ ಆಪ್ತೇಷ್ಠರ ಬುಡಕ್ಕೆ ಬಂದು ನಿಂತಿದೆ. ಮುಡಾ ಮಾಜಿ ಅಧ್ಯಕ್ಷ ಮರೀಗೌಡ, ಶಿವಣ್ಣ, ಮಾಜಿ ಆಯುಕ್ತ ನಟೇಶ್, 2004ರಲ್ಲಿ ಮೈಸೂರು ತಹಶೀಲ್ದಾರ್ ಆಗಿದ್ದ ಮಾಳಿಗೆ ಶಂಕರ್ರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.
ಸತತ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಶಿವಣ್ಣ ಸಂಜೆ ಹೊತ್ತಿಗೆ ಅಸ್ವಸ್ಥಗೊಂಡ್ರು. ಕೂಡ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಇನ್ನು, ಈ ಕ್ಷಣದವರೆಗೂ ಮರೀಗೌಡ, ಮಾಳಿಗೆ ಶಂಕರ್ ವಿಚಾರಣೆಯನ್ನು ಇಡಿ ಮುಂದುವರೆಸಿದೆ. ಇನ್ನು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಇಡಿ ಸಮನ್ಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ
ಈ ಮಧ್ಯೆ ಮುಡಾದ ಮತ್ತಷ್ಟು ಅಕ್ರಮಗಳು ಬಹಿರಂಗಗೊಂಡಿವೆ. ಸರಿಯಾದ ಮೂಲ ದಾಖಲೆಗಳೇ ಇಲ್ಲದೇ 1950 ಸೈಟ್ ಹಂಚಿಕೆಯಾಗಿವೆ. ಅಲ್ಲದೇ 5 ಸಾವಿರ ಸೈಟ್ಗಳಿಗೆ 2 ಸಾವಿರ ಬಾಂಡ್ ಪೇಪರ್ಗಳೇ ಇಲ್ಲ ಎನ್ನಲಾಗಿದೆ
ಈ ಮಧ್ಯೆ, ಮುಡಾ ಕೇಸಲ್ಲಿ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನವೆಂಬರ್ 23ಕ್ಕೆ ನಡೆಸಲು ಹೈಕೋರ್ಟ್ ತೀರ್ಮಾನಿಸಿದೆ. ಇದೇ ಶುಕ್ರವಾರ ಅಥ್ವಾ ಶನಿವಾರ ವಿಚಾರಣೆ ನಡೆಸಿ ಎಂಬ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ, ಕೆವಿ ಅರವಿಂದ್ ಅವರಿದ್ದ ಪೀಠ ತಿರಸ್ಕರಿಸಿದೆ.