ಚಿತ್ರದುರ್ಗ :- ಮುಡಾ ಹಗರಣ ಕುರಿತಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಂಎಲ್ಸಿ ಕೆ.ಎಸ್. ನವೀನ್ ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೇಲೆ ಬಂದ ಆರೋಪಗಳಿಗೆ ಅವರೇ ತೀರ್ಪು ಬರೆದಿದ್ದಾರೆ. ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಮ್ಮ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಮುಡಾಗೆ 14 ಸೈಟ್ ವಾಪಸ್ ಕೊಡೋದಾಗಿ ಪತ್ರ ಬರೆದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಇಡಿ, ಲೋಕಾಯುಕ್ತಕ್ಕೂ ಮೊದಲೇ ಸ್ವತಃ ಅವರ ತೀರ್ಪು ಅವರೇ ಬರೆದಿದ್ದಾರೆ.
ನೀವು ನಿತ್ಯ ಅಲೋವೆರಾ ಬಳಸುತ್ತಿದ್ದಾರಾ!? ಹಾಗಿದ್ರೆ ಅದರ ಬೆನಿಫಿಟ್ ತಿಳಿಯಲೇಬೇಕು!
ಹಗಣರ ನಡೆದಿದೆ, ಸಿಎಂ , ಅವರ ಕುಟುಂಬ ಇರುವ ಬಗ್ಗೆ ದಾಖಲೆ ಇವೆ. ಮಾಧ್ಯಮಗಳ ಮುಂದೆ ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡಿದ್ರು. ತಮ್ಮ ಅವಧಿಯಲ್ಲಿ ಏನೂ ನಡೆದಿಲ್ಲಾ ಅನ್ನೋ ರೀತಿ ಮಾತನಾಡಿದ್ರು. ಸತ್ಯ ಹರಿಶ್ಚಂದ್ರನ ನಂತ್ರ ತಾನೇ ಅಂತಾ ಸಿದ್ದರಾಮಯ್ಯ ಪ್ರತಿಪಾದನೆ ಮಾಡಿದ್ರು. ಆದ್ರೆ ಈಗ ನ್ಯಾಯಾಲಯ ಅದೇಶದಂತೆ FIR ಆಗಿದೆ.
ನಿನ್ನೆ ಇಡಿ ಕೂಡ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಸತ್ಯ ಹರಿಶಚಂದ್ರರಂತೆ ಮಾತನಾಡುವ ಸಿದ್ದರಾಮಯ್ಯ ತಮ್ಮನ್ನು ತನಿಖೆಗೆ ಒಳಪಡಿಸಲಿ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಲೋಕಾಯುಕ್ತ ಬಾಗಿಲು ಹಾಕ್ಸಿದ್ರು. ಎಸಿಬಿ ಮಾಡಿ ಎಲ್ಲಾ ಫೈಲ್ ತಮ್ಮ ಮುಂದೆ ಬರುವಂತೆ ಮಾಡಿದ್ರು
ರಾಜ್ಯಪಾಲರು ಪತ್ರ ಬರೆಯುವ ಹಕ್ಕನ್ನೇ ಸಿದ್ದರಾಮಯ್ಯ ಕಸಿದುಕೊಂಡ್ರು. ತಮ್ಮ ಸುತ್ತಲಿನ ಅವಿವೇಕಿಗಳ ಕಾರ್ಯದಿಂದ ಇಂದು ಸಿಎಂ ಸಿಲುಕಿ ಹಾಕಿಕೊಂಡಿದ್ದಾರೆ. ಸತ್ಯ ಹರಿಶ್ಚಂದ್ರನ ವಂಶದವರಂತೆ ಮಾತನಾಡುವ ಸಿದ್ದರಾಮಯ್ಯ. ರಾಜಿನಾಮೆ ನೀಡಿ, ತನಿಖೆಗೆ ಒಳಪಡಲಿ. ಈಗಾಗಲೇ ಲೋಕಾಯುಕ್ತ, ಇಡಿ ಗಳಲ್ಲಿ FIR ಆಗಿದೆ. ಇದು ಬಿಜೆಪಿ ಮಾತ್ರವಲ್ಲ ಎಲ್ಲ ಜನರ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಪತ್ನಿಯ 14 ಸೈಟ್ ಮಾತ್ರವಲ್ಲ, ಮುಡಾದ 4000 ಸೈಟ್ ಕುರಿತು ತನಿಖೆಯಾಗಲಿ. ಮುಡಾದಲ್ಲಿ ಸಾರ್ವಜನಿಕವಾಗಿ 4000 ಸೈಟ್ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ಸಿಎಂ ಆಪ್ತರಿಗೆ ಮನಬಂದಂತೆ ವಿತರಣೆ ಮಾಡಿದ್ದಾರೆ. ಸಿಎಂ ಪಟಾಲಂಗೆ ಎಷ್ಟು ಸೈಟ್ ಹಂಚಿದ್ದಾರೆ ಎಂಬುದು ಬಹಿರಂಗವಾಗಲಿ. ಮುಡಾ 4000 ಸೈಟ್ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ರಾಜಿನಾಮೆ ಕೊಡುವ ಕುರಿತು ಸಿಎಂ ಒಬ್ಬರೇ ಕೂತು ವಿಚಾರ ಮಾಡ್ಲಿ. ಈ ಹಿಂದೆ ಅವರು ಮಾತನಾಡಿದ ಮಾತುಗಳನ್ನು ಅವಲೋಕನೆ ಮಾಡಿಕೊಳ್ಳಲಿ. ಆ ನಂತರ ವಿಚಾರ ಮಾಡಿ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಚಿತ್ರದುರ್ಗದಲ್ಲಿ ಎಂಎಲ್ಸಿ ಕೆ.ಎಸ್.ನವೀನ್ ಆಗ್ರಹಿಸಿದ್ದಾರೆ.