ಮೈಸೂರು: ಮುಂದೆ ರಾಜಕೀಯ ಪರಿಸ್ಥಿತಿ ಬದಲಾಗಬಹುದು ಎಂಬ ಹೇಳಿಕೆ ಕುರಿತು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನ ಸರಿಯಾಗಿ ಅರ್ಥೈಸಿಕೊಂಡಿಲ್ಲ. ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಲೆ ಇದೆ. ಆದರು ಅದು ಸಾಧ್ಯವಾಗಿಲ್ಲ ಅಂತ ಮೊದಲು ಹೇಳಿದ್ದೆ. ಅದಾದ ನಂತರ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೇನೆ. ಪಕ್ಷದ ಅಧ್ಯಕ್ಷರು ನಾಳೆ ಬದಲಾದರು ಆಗಬಹುದು. ಈ ಕಾರಣದಿಂದ ಕಚೇರಿಯನ್ನ ಬೇಗ ಕಟ್ಟಿ ಎಂದಿದ್ದೇನೆ. ಮುಂದಿನ ಬಾರಿಯು ನಮ್ಮ ಸರ್ಕಾರವೆ ಅಧಿಕಾರಕ್ಕೆ ಬರುತ್ತೆ ಎಂದರು. ಇನ್ನೂ ಉಪ ಚುನಾವಣೆಯಲ್ಲಿ ನಿಮಗೆ ಅಚ್ಚರಿ ಆಗುವಂತಹ ಫಲಿತಾಂಶ ಬರುತ್ತದೆ. ಮೂರಕ್ಕೆ ಮೂರು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲ್ಲಿದೆ. ಮಹಾರಾಷ್ಟ್ರದಲ್ಲೂ ನಮ್ಮದೇ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಐದು ವರ್ಷಗಳು ಸಿದ್ದರಾಮಯ್ಯರೆ ಸಿಎಂ ಆಗಿರುತ್ತಾರೆ. ಅವರೆ ಸಿಎಂ ಅಂದ ಮೇಲೆ ನನ್ನನ್ನ ಪದೇ ಪದೇ ಏಕೆ ಕೀಟಲೆ ಮಾಡುತ್ತೀರಿ. ಇದರಲ್ಲಿ ನನ್ನ ಆಸೆಯ ಪ್ರಶ್ನೆಯೆ ಇಲ್ಲ ಎಂದು ಪುನರುಚ್ಛರಿಸಿದರು.
ಇನ್ನೂ ಪಕ್ಷದಲ್ಲಿ ಜಮೀರ್ ವಿರುದ್ಧ ಶಿಸ್ತು ಕ್ರಮ ವಿಚಾರವಾಗಿ ಮಾತನಾಡಿ , ಅವರ ವಿಚಾರಣೆ ಯಾಕೆ ತಡವಾಗಿದೆ ನನಗೆ ಗೊತ್ತಿಲ್ಲ. ನಮ್ಮಲ್ಲಿ ಶಿಸ್ತುಪಾಲನ ಸಮಿತಿ ಈ ರೀತಿ ಕ್ರಮವಹಿಸುತ್ತೆ. ಯಾಕೆ ತಡವಾಗಿದೆ ಎಂಬುದನ್ನು ಪಕ್ಷದ ಅಧ್ಯಕ್ಷರನ್ನೆ ಕೇಳಬೇಕು ಎಂದರು.