ಬೆಂಗಳೂರು:- ಸಿಎಂ ಕೇಸ್ನಲ್ಲಿ ಅವರೇ ಜಡ್ಜ್, ಅವರೇ ಲಾಯರ್ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬೇರೆಯವರು ತಪ್ಪು ಮಾಡಿದರೆ ನೀವು ರಾಜೀನಾಮೆ ಕೇಳ್ತಿದ್ರಿ. ನಿಮ್ಮ ವಿಷಯದಲ್ಲಿ ಅದು ಇಲ್ಲ. ನಿಮ್ಮ ಕೇಸ್ನಲ್ಲಿ ನೀವೇ ಜಡ್ಜ್, ನೀವೇ ವಕೀಲರು ಆದರೆ ಬೇರೆ ಅವರ ಕೇಸ್ನಲ್ಲಿ ಜಡ್ಜ್ ಮೆಂಟ್ ಮಾತ್ರ ನೀವು ಕೊಡುತ್ತೀರಿ ಎಂದು ಆತ್ಮಸಾಕ್ಷಿ ಬಗ್ಗೆ ಮಾತಾಡಿದ್ದ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ನಾಯಕ ಸಿ ಟಿ ರವಿ ತಿರುಗೇಟು ಕೊಟ್ಟಿದ್ದಾರೆ.
ನಿನ್ನೆ ಸಿದ್ದರಾಮಯ್ಯ ನೈತಿಕತೆ, ಆತ್ಮಸಾಕ್ಷಿ ಮಾತುಗಳನ್ನಾಡಿದ್ದಾರೆ. ಬಹಳ ಸಂತೋಷ ಸಂಗತಿ. ನಾನು ಸಮಾಜವಾದಿಗಳಿಗೆ ಆತ್ಮ, ಆತ್ಮಸಾಕ್ಷಿ ಇರೊಲ್ಲ ಅಂದುಕೊಂಡಿದ್ದೆ. ಸಿದ್ದರಾಮಯ್ಯಗೆ ಆತ್ಮ, ಆತ್ಮಸಾಕ್ಷಿ ಇದೇ ಅನ್ನೋದು ಸಂತೋಷ. ಯಾರು ಆತ್ಮ ಇದೆ ಎಂದು ನಂಬುತ್ತಾರೋ ಅವರು ಪರಮಾತ್ಮನನ್ನು ನಂಬಬೇಕು. ಜಗತ್ತಿನಲ್ಲಿ ಪರಮಾತ್ಮ ಮತ್ತು ಆತ್ಮಕ್ಕೆ ಮೋಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಬಹುದು. ಪರಮಾತ್ಮನ ಬಳಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಪರಮಾತ್ಮನ ಹತ್ತಿರ ನಾವೇನು ಒಳ್ಳೆಯದು ಮಾಡುತ್ತೇವೆ ಅದು ದಾಖಲಾಗುತ್ತೆ. ಏನು ತಪ್ಪು ಮಾಡಿದ್ದೀವೋ ಅದು ದಾಖಲಾಗುತ್ತೆ. ಸಿಎಂ ಅವರು ನಿಜವಾಗಿ ಆತ್ಮ ಇದೆ, ಪರಮಾತ್ಮ ಇದ್ದಾನೆ ಎಂದು ಒಪ್ಪಿಕೊಳ್ಳೋದಾದ್ರೆ ಸುಳ್ಳಿನ ಸಮರ್ಥನೆಗೆ ಇಳಿಯುತ್ತಿರಲಿಲ್ಲ. ಅಪವಾದ ಬಂದ ದಿನವೇ ರಾಜೀನಾಮೆ ಕೊಡುತ್ತಿದ್ದಿರಿ ಎಂದು ಸಿಎಂ ಆತ್ಮಸಾಕ್ಷಿ ಮಾತಿಗೆ ತಿರುಗೇಟು ನೀಡಿದರು