ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಕೊಟ್ಟಿರುವ ತೀರ್ಪು ಸಂತಸ ತಂದಿದೆ ಎಂದು ಸಚಿವ ಎಂ ಸಿ ಸುಧಾಕರ್ ಹೇಳಿದ್ದಾರೆ.
ಕೊತ್ತಂಬರಿ ಸೊಪ್ಪು ಫ್ರಿಡ್ಜ್ ನಲ್ಲಿಟ್ಟರೂ ಬೇಗ ಕೆಟ್ಟು ಹೋಗತ್ತಾ? ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ!
ಈ ಸಂಬಂಧ ಮಾತನಾಡಿದ ಅವರು, ನಾವು ಪ್ರಾರಂಭದಲ್ಲಿ ಸಿಬಿಐ ತನಿಖೆಗೆ ಹೇಳಿಕೆ ನೀಡಿದ್ದೆ. ಲೋಕಾಯುಕ್ತ ತನಿಖೆಗೆ ಕೊಟ್ಟ ಮೇಲೆ ಅದು ತನಿಖೆ ಮಾಡುವಾಗ ಮತ್ತೊಂದು ತನಿಖೆಯ ಅವಶ್ಯಕತೆ ಎನಿದೆ ಎಂದಿದ್ದೆ.
ಇದು ಕೇವಲ ರಾಜಕೀಯ ದುರುದ್ದೇಶದಿಂದ ಸರ್ಕಾರಕ್ಕೆ ಒತ್ತಡ ಹಾಕುವ ಹುನ್ನಾರ. ಸಿಬಿಐ ಮೂಲಕ ಅನುಕೂಲಕ್ಕೆ ಬಳಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ಈ ತೀರ್ಪು ಸಂತಸ ತಂದಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಈ ತೀರ್ಪಿನಿಂದ ಮತ್ತಷ್ಟು ವಿಶ್ವಾಸ ಹೆಚ್ಚಾಗಿದೆ ಎಂದರು.
ತೀರ್ಪಿನಿಂದ ಐದು ವರ್ಷ ಸಿಎಂ ಸಿದ್ದರಾಮಯ್ಯ ಎಂಬ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ವಿಚಾರವಾಗಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ನಾವು ಪ್ರತಿಕ್ರಿಯಿಸೋ ಅಗತ್ಯ ಇಲ್ಲ ಎಂದರು.