ಬೆಂಗಳೂರು: ಮುಡಾ ಹಗರಣದಲ್ಲಿ ಇಡಿ ತನಿಖೆ ತೀವ್ರಗೊಳಿಸಿದ್ದು, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಗೆ ಸಂಕಷ್ಟ ಎದುರಾಗಿದೆ. ಇಡಿ ಮುಡಾ ಹಗರಣ ಸಂಬಂಧ ಇದೀಗ ಸಚಿವ ಭೈರತಿ ಸುರೇಶ್ ಅವರ ಸಚಿವಾಲಯದ ಸಿಬ್ಬಂದಿಗೆ ನೋಟೀಸ್ ಜಾರಿ ಮಾಡಿದೆ. . ಭೈರತಿ ಸುರೇಶ್ ಅವರ ಸಚಿವಾಲಯದ ಸಿಬ್ಬಂದಿಗೂ ನೋಟಿಸ್ ನೀಡಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಮುಡಾ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಇಟಿ ಸಮನ್ಸ್ ಜಾರಿ ಮಾಡಿದ್ದು, ಪ್ರಕರಣ ಸಂಬಂಧ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದೆ.
ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ತುಮಕೂರಿಗೆ ಕೊಡಬೇಕು: ಸಿಎಂ, ಡಿಸಿಎಂಗೆ ಜಿ. ಪರಮೇಶ್ವರ್ ಮನವಿ