ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಹೋರಾಟಗಾರ ಟಿಜೆ ಅಬ್ರಹಾಂ ದೂರು ನೀಡಿದ್ದಾರೆ. ಕೃಷಿ ಜಮೀನಿನ ಬಗ್ಗೆ ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಪತ್ನಿ ಹೆಸರಲ್ಲಿರುವ 3.16 ಎಕರೆ ಜಮೀನು ಬಗ್ಗೆ ಮಾಹಿತಿ ಮುಚ್ಚಿಟ್ಟ ಆರೋಪ ಮಾಡಿದ್ದಾರೆ.
Dengue Case: ಡೆಂಗ್ಯೂ ಆರ್ಭಟ: ಕಳೆದ 24 ಗಂಟೆಯಲ್ಲಿ 293 ಕೇಸ್ ದೃಢ!
2013ರ ಚುನಾವಣಾ ಅಫಿಡವಿಟ್ನಲ್ಲಿ ದಾಖಲೆಗಳು ಸಲ್ಲಿಕೆ ಆಗಿಲ್ಲ. ಸಿದ್ದರಾಮಯ್ಯ ಗಮನದಲ್ಲಿದ್ದೂ ಕೂಡ ಕೃಷಿ ಜಮೀನಿನ ವಿವರಗಳನ್ನು ಮುಚ್ಚಿ ಇಡಲಾಗಿದೆ. ಉದ್ದೇಶ ಪೂರ್ವಕವಾಗಿ ಕಲಂ ಖಾಲಿ ಬಿಟ್ಟಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.