ಬೆಂಗಳೂರು: ಮುಡಾ ಕೇಸ್ ನಲ್ಲಿ ಇ ಡಿ ಹಂಚಿಕೊಂಡಿರುವ ಮಾಹಿತಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.. ಮುಡಾ ಹಗರಣದಲ್ಲಿ ಸಿ ಎಂ ಸಿದ್ದರಾಮಯ್ಯನೂ ಭಾಗಿಯಾರಿರೋ ಬಗ್ಗೆ ಉಲ್ಲೇಖ ಮಾಡಿರುವ ಇ ಡಿ ಇಡೀ ಮುಡಾ ಸೈಟು ಹಂಚಿಕೆಯಲ್ಲಿ 300 ಕೋಟಿ ಅವ್ಯವಹಾರದ ಬಗ್ಗೆ ಹೇಳಿದೆ. ಈಗ ಮುಡಾ ಪ್ರಕರಣ ಸಿ ಎಂ ಸಿದ್ದರಾಮಯ್ಯ & ಫ್ಯಾಮಿಲಿಗೆ ಮಾತ್ರ ವಲ್ಲದೆ ವಿರೋಧ ಪಕ್ಷದವರಿಗೆ ಹಾಗು ಈ ಹಿಂದಿನ ಅಧಿಕಾರಿಗಳಿಗೂ ನಡುಕ ಶುರುವಾಗಿದೆ. ಇ ಡಿ ಪ್ರಕಟನೆ ಕಂಪ್ಲೀಟ್ ರಿಪೋರ್ಟ್ ತೋರಿಸ್ತೀವಿ ನೋಡಿ
ಮುಡಾ ಕೇಸ್ ನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಸಿ ಎಂ ಭಾಗಿಯಾಗಿರೋ ಬಗ್ಗೆ ಇಡಿ ಉಲ್ಲೇಖ ಮಾಡಿದೆ. ಅಷ್ಟೇ ಅಲ್ಲ 300 ಕೋಟಿ ಮೌಲ್ಯದ 142 ಸ್ಥಿರಾಸ್ತಿಗಳನ್ನು ಸೀಜ್ ಮಾಡಿರೋದಾಗಿ ಇ ಡಿ ತಿಳಿಸಿದೆ. ಈ ಬಗ್ಗೆ ಇಡಿ ತನ್ನ ಅಧಿಕೃತ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದೆ. ಇ ಡಿ ಮುಡಾ ಕೇಸ್ ನಲ್ಲಿ ಆಗಿರುವ ತನಿಖೆ ವಿಚಾರ ಪ್ರಕಟಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಠಿಸಿದೆ.
ಮಹಿಳೆಯರು ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವ ಬಳಸಿ ಪತ್ನಿ ಹೆಸರಲ್ಲಿ 14 ನಿವೇಶನಗಳ ಪರಿಹಾರ ಪಡೆದಿದ್ದಾರೆ. ಭೂಮಿಯನ್ನು ಮುಡಾ 3.24 ಲಕ್ಷ ರು.ಗೆ ಸ್ವಾಧೀನಪಡಿಸಿಕೊಂಡಿದೆ. 14 ನಿವೇಶನಗಳ ರೂಪದಲ್ಲಿ 56 ಕೋಟಿ ಮೌಲ್ಯದ ಪರಿಹಾರ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡು ವಲ್ಲಿ ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ಪಾತ್ರ ಪ್ರಮುಖವಾಗಿದೆ ಎಂದು ಇ.ಡಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತನಿಖೆ ವೇಳೆ ಸಿದ್ದರಾಮಯ್ಯ ಪತ್ನಿಗೆ ಹಂಚಿಕೆ ಯಾಗಿರುವ 14 ನಿವೇಶನಗಳು ಹೊರತುಪಡಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೂ ಮುಡಾ ದಿಂದ ಅಕ್ರಮವಾಗಿ ಹಂಚಿಕೆ ಮಾಡಿರುವುದು ತಿಳಿದುಬಂದಿದೆ. ಉದ್ಯಮಿಗಳು ನಿವೇಶನಗಳನ್ನು ಭಾರೀ ಲಾಭಕ್ಕೆ ಮಾರಾಟ ಮಾಡಿ ಅಪಾರ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ್ದಾರೆ. ಬಳಿಕ ಅಕ್ರಮವಾಗಿ ಹಣ ವರ್ಗಾವಣೆಮಾಡಲಾಗಿದೆ. ಅಕ್ರಮ ಹಣ ವನ್ನು ಕಾನೂನು ಬದ್ದ ರೂಪಕ್ಕೆ ಪರಿವರ್ತಿಸಿ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿರುವ ಸ್ಥಿರಾಸ್ತಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್ಗಳ ಹೆಸರಿನಲ್ಲಿ ನೋಂದಣಿಯಾಗಿವೆ.
ಮುಡಾದಿಂದ ಪಡೆದ ನಿವೇಶನಗಳನ್ನು ಭಾರಿ ಲಾಭಕ್ಕೆ ಮಾರಾಟ ಮಾಡಿ ಗಳಿಸಿದ ಹಣದಿಂದ ಸಂಪಾದಿಸಿದ 142 ಆಸ್ತಿಗಳು 300 ಕೋಟಿ ಮೌಲ್ಯದ್ದಾಗಿದ್ದು ಇವುಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ ಎಂದು ಇ ಡಿ ತಿಳಿಸಿದೆ….ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಐದು ತಿಂಗಳ ಹಿಂದೆ ಸಲ್ಲಿಸಿದ ದೂರು ಮತ್ತು ಮೈಸೂರು ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಇ.ಡಿ. ತನಿಖೆ ಕೈಗೊಂಡಿತ್ತು.
ಮುಡಾ ಕಚೇರಿ, ಏಜೆಂಟರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿತ್ತು. ಅಲ್ಲದೆ, ಸಿದ್ದರಾಮಯ್ಯ ಅವರ ಆಪ್ತರನ್ನು ಮತ್ತು ಮುಡಾದ ಹಿಂದಿನ ಹಿರಿಯ ಅಧಿಕಾರಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಲಭ್ಯ ಮಾಹಿತಿ ಪ್ರಕಾರ ಮೇರೆಗೆ ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು 300 ಕೋಟಿ ರು. ಮೌಲ್ಯದ 142 ಸ್ಥಿರಾಸ್ತಿ ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.
ಪ್ರಭಾವಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನ ಹಂಚಿಕೆ ಮಾಡಿರುವುದು ಸಹ ತನಿಖೆ ಯಲ್ಲಿ ಬಹಿರಂಗವಾಗಿದೆ. ಹಿಂದಿನ ಮುಡಾ ಅಧ್ಯಕ್ಷರು ಮತ್ತು ಆಯುಕ್ತರಿಗೆ ಸ್ಥಿರಾಸ್ತಿ, ಮುಡಾ ನಿವೇಶನಗಳು, ನಗದು ಇತ್ಯಾದಿಗಳ ರೂಪದಲ್ಲಿ ಅಕ್ರಮವಾಗಿ ಸಂದಾಯವಾಗಿದೆ. ಈ ಸಂಬಂಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಲ್ಲಿ ಆಸ್ತಿ,
ಐಷಾರಾಮಿ ವಾಹನ ಇತ್ಯಾದಿ ಖರೀದಿಗೆ ಸಹ ಕಾರಿ ಸಂಘದ ಮೂಲಕ ಹಣ ವಸೂಲಿ ಮಾಡಿರುವುದು ಕೂಡ ಬಯಲಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಮುಡಾ ಪ್ರಕರಣದ ಸಮಗ್ರ ತನಿಖೆ ಮಾಡಿರುವ ಇಡಿ ತನ್ನ ತನಿಖಾ ವರದಿಯನ್ನು ಹಂಚಿಕೊಂಡಿದ್ದು ಸಿ ಎಂ ಸೇರಿದಂದೆ ಈ ಹಿಂದಿನ ಅಧಕ್ಷರುಗಳು,ಆಯುಕ್ತರು ಹಾಗು ವಿರೋಧ ಪಕ್ಷಗಳ ಬುಡಕ್ಕೂ ಬರುವ ಸಾಧ್ಯತೆ ಇದೆ.