ಸಿ ಎಂ ಸಿದ್ದರಾಮಯ್ಯಗೆ ಮುಡಾ ಟೆನ್ಷನ್ ಮುಂದುವರೆದಿದೆ. ಮುಡಾ ಹಗರಣದ ತನಿಖೆಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.ಇತ್ತ ಮುಡಾ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ನೆಡೆಯಲಿದೆ. ಇದೇ ಕಾರಣಕ್ಕೆ ಸಿ ಎಂ ಟೆನ್ಷನ್ ಮುಂದುವರೆದಿದೆ.
ಸಿ ಎಂ ಸಿದ್ದರಾಮ್ಯಯಗೆ ಮುಡಾ ಪ್ರಕರಣದ ಟೆಂನ್ಷನ್ ಇನ್ನೂ ಕಡಿಮೆಯಾಗಿಲ್ಲ. ಸಿ ಎಂ ಗೆ ಒಂದು ಕಡೆ ಅಧಿಕಾರ ಬಿಟ್ಟುಕೊಡ ಬೇಕು ಎಂದು ಎದ್ದಿರುವ ಕೂಗಿನ ಟೆನ್ಷನ್ ಆದ್ರೆ ಇನ್ನೊಂದು ಕಡೆ ಮುಡಾ ಕೇಸ್ ಸಿಬಿಐ ಗೆ ವಹಿಸಬೇಕು ಎಂದು ಹಾಕಿಕೊಂಡಿರುವ ಅರ್ಜಿವಿಚಾರಣೆ ಕೊನೆ ಹಂತಕ್ಕೆ ಬರ್ತಿರೋದು.
ಇನ್ನು ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದ ಆರೋಪದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ & ಭೂಮಾಲೀಕ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ಅರ್ಜಿ ವಿಚಾರಣೆಯನ್ನು
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ಮಾರ್ಚ್ 22ಕ್ಕೆ ಮುಂದೂಡಿದೆ. ಸಿ ಎಂ ಪರವಾದ ವಾದ ಮಂಡನೆ ಮಾಡಬೇಕಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪರವಾಗಿ ವಿಚಾರಣೆ ಮುಂದೂಡಿಕೆ ಮಾಡಲು ಶತಭಿಷ್ ಶಿವಣ್ಣ ಮನವಿ ಮಾಡಿದ್ರು.
ಇನ್ನು ಇದೇ 27 ರಂದು ನ್ಯಾಯಮೂರ್ತಿ ನಾಗಪ್ರಸನ್ನ ಪೀಠವು ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವುದರ ಅರ್ಜಿಯ ವಿಚಾರಣೆ ನಡೆಸಲಿದೆ. ಅಂದು ಬಹುತೇಕ ವಾದ ಪ್ರತಿವಾದಗಳು ಮುಗಿಯುವ ಸಾಧ್ಯತೆ ಇದ್ದು ನ್ಯಾಯಮೂರ್ತಿಗಳು ಆದೇಶವನ್ನು ಕಾಯ್ದಿರಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸೋಮವಾರದ ನಂತರ ಸಿ ಎಂ ಸಿದ್ದರಾಮಯ್ಯಗೆ ನಿಜವಾದ ಟೆನ್ಷನ್ ಶುರುವಾಗಲಿದ್ದು ನ್ಯಾ.ಮೂರ್ತಿ ನಾಗಪ್ರಸನ್ನರ ಪೀಠ ವಿಚಾರಣೆ ಪೂರ್ಣಗೊಳಿಸಿ ಸಿಬಿಐ ತನಿಖೆ ಗ್ರೀನ್ ಸಿಗ್ನಲ್ ಕೊಡುತ್ತೋ ಇಲ್ಲ ಅರ್ಜಿ ವಜಾ ಮಾಡುತ್ತೋ ಅನ್ನೋದು ಕಾದು ನೋಡಬೇಕಿದೆ.