ಗದಗ:- ಸಿದ್ದರಾಮಯ್ಯ ಪರ ಜಿಟಿ ದೇವೇಗೌಡ ಬ್ಯಾಟಿಂಗ್ ವಿಚಾರವಾಗಿ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಖರ್ಜೂರ ಹಾಗೂ ತುಪ್ಪ ಈ ರೀತಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಈ ಸಂಬಂಧ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣ ಜಗತ್ ಜಾಹೀರವಾಗಿದೆ, ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾವು ಬೇರೆ ಭಾಷೆಯಲ್ಲಿ ಮಾತನಾಡಲು ಆಗೋದಿಲ್ಲ, ನಮಗೆ ಸಂಸ್ಕಾರ ಇದೆ,. ಸಿಎಂ ಅವರೇ ಆತ್ಮಸಾಕ್ಷಿ ಅಂತಾ ಹೇಳಿದ್ರು.. ಅದು ಕಾಮೆಂಟ್ ಆಗ್ತಿದೆ..
ಶಾಸನ ಸಭೆಯಲ್ಲಿ ಸೈಟ್ ವಾಪಸ್ ಕೊಡಬೇಕಾಗಿತ್ತು. ಆರ್ ಅಶೋಕನದು ಹಿಡ್ಕೊಂಡಿದ್ದೀರಿ.. ಈ ಪ್ರಕರಣಕ್ಕೆ ಏನು ಸಂಬಂಧ. ಆರ್ ಆಶೋಕ ಆಗಲೇ ವಾಪಸ್ಸ್ ನೀಡಿದ್ರು, ನೀವು ಆವಾಗಲೇ ಮಾಡಬೇಕಾಗಿತ್ತು. ವ್ಯವಸ್ಥೆಯಲ್ಲಿ ಯಾರು ದೊಡ್ಡವರಲ್ಲ, ಕಾನೂನು ಎಲ್ಲರಿಗೂ ಒಂದೆ ಎಂದರು.
ಸಿಎ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಜಿ ಡಿ ದೇವೇಗೌಡ ವಿಚಾರವಾಗಿ ಮಾತನಾಡಿ, ಅದನ್ನು ಅವರನ್ನೇ ಕೇಳಿಬೇಕು, ಅವ್ರು ಸೀನಿಯರ್ ರಾಜಕಾರಣಿ. ಯಾಕೆ ಹೀಗೆ ಹೇಳ್ತಾರೆ ಅದು ಅವರಿಗೆ ಗೊತ್ತು. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು. ಔಷಧಿ ಇಲ್ಲದ ಹಾಗೇ ಮಾಡಿಕೊಂಡಿದ್ದಾರೆ. ಕಾನೂನು ಇದೆ, ಕಾನೂನು ಯಾವ ರೀತಿ ನಿರ್ಮಾಣ ಮಾಡುತ್ತೆ ನೋಡೋಣ ಎಂದರು.