ಬೆಂಗಳೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗುವಂತಿದೆ. ಇದೀಗ ಮುಡಾ ಸೈಟ್ ಹಂಚಿಕೆ ಹಗರಣ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಆತಂಕ ತಂದೊಡ್ಡಿದೆ. ಹೌದು ಮುಡಾ ಹಗರಣ ಪ್ರಕರಣಕ್ಕೆ ದೇವರಾಜು ಅಣ್ಣನ ಮಗಳು ಜಮುನಾ ಅವರು ಕಾಣೂ ಹೋರಾಟಕ್ಕೆ ಮೂಮದಾಗಿದ್ದಾರೆ.
ಮುಡಾ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಅಣ್ಣನ ಮಗಳು ಜಮುನಾ ಅವರು ಈ ಸಂಬಂಧ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ.464ರ 3.16 ಎಕರೆ ಜಾಗ ಸಂಬಂಧ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮುನಾ ಅವರು, ತನಗೆ ಪಾಲು ಬರಬೇಕೆಂದು ಸಿಎಂ ಸಿದ್ದರಾಮಯ್ಯ ಪತ್ನಿ ಸೇರಿ 12 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಸಿಎಂ ಕುಟುಂಬಕ್ಕೆ ಮಾರಾಟವಾಗಿರುವ ಜಮೀನು ಸಂಬಂಧ ದಾಖಲಾದ ಕೇಸ್ ಇದಾಗಿದ್ದು, ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜೊತೆಗೆ ಸ್ವಂತ ದೊಡ್ಡಪ್ಪ ದೇವರಾಜು ಮತ್ತು ಕುಟುಂಬದವರ ಮೇಲೂ ದಾವೆ ಹೂಡಿದ್ದು,
ರೈತರೇ ಗಮನಿಸಿ.. ಪ್ರತಿ ಹೆಕ್ಟೇರ್ʼಗೆ 10,000 ರೂಪಾಯಿ ನೀಡಲಿದೆ ಈ ಯೋಜನೆ! ಇಂದೇ ಅರ್ಜಿ ಸಲ್ಲಿಸಿ
ಸಿ.ಎನ್.ಆರ್. ನಂಬರ್ KAMS020031832024ರ ಅಡಿಯಲ್ಲಿ ಒಟ್ಟು 12 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಜುನಾಥ್ ಸ್ವಾಮಿ, ಜೆ.ದೇವರಾಜು, ಸರೋಜಮ್ಮ, ಡಿ.ಶೋಭಾ, ಡಿ.ದಿನಕರ್, ಡಿ.ಪ್ರಭಾ, ಡಿ.ಪ್ರತಿಭಾ, ಡಿ.ಶಶಿಧರ್, ಬಿ.ಎಂ.ಮಲ್ಲಿಕಾರ್ಜುನ್ ಸ್ವಾಮಿ, ಡಿ.ಪಾರ್ವತಿ, ಮುಡಾ ಕಮಿಷನರ್, ಮಾಜಿ ಮೈಸೂರು ಜಿಲ್ಲಾಧಿಕಾರಿಗಳು ವಿರುದ್ಧ ದಾವೆ ಹೂಡಿದ್ದಾರೆ.
ನನ್ನ ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿದ್ದಾರೆ. ನನ್ನ ತಂದೆಯ ಪಾಲಿನ ಜಾಗವನ್ನು ಮೋಸದಿಂದ ಬರೆಸಿಕೊಂಡು ಈಗ ಬೇರೆಯವರಿಗೆ ಮಾರಿದ್ದಾರೆ. ನಮಗೆ ನ್ಯಾಯ ಬೇಕು ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಖಾತೆ ಮಾಡಿಸಿಕೊಡುವ ಹೆಸರಿನಲ್ಲಿ ಸಹಿ ಪಡೆದು ಮೋಸ ಮಾಡಿದ್ದಾರೆ. ನಮಗೆ ಈ ಜಮೀನು ವಿಚಾರ ಮಾಧ್ಯಮದ ಮೂಲಕ ಗೊತ್ತಾಗಿದೆ. ಹೀಗಾಗಿ ಈಗ ಕೇಸ್ ಹಾಕಿದ್ದೇವೆ ಎಂದು ಮೈಲಾರಯ್ಯನ ಮಗಳು ಜಮುನಾ ಹೇಳಿದ್ದಾರೆ.